ಹಾಸನ: ಹಿರಿಯ ಪತ್ರಕರ್ತರಾದ ರಾಮು ಮುರಿಗೌಡರು, ಮುನಿಕೃಷ್ಣಪ್ಪ, ಹಾಲ್ದೊಡೇರಿ ಪುರುಷೋತ್ತಮ ರಾವ್, ಸುದೀಂದ್ರ, ಸಂಪತ್ ಕುಮಾರ್ ಅವರ ನಿಧನಕ್ಕೆ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಅಧ್ಯಕ್ಷರಾದ ಎಸ್.ಆರ್. ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ಸಂತಾಪ ಸಭೆ ನಡೆಸಲಾಯಿತು.
ಮೊದಲು ಎರಡು ನಿಮಿಷ ಮೌನ ಆಚರಿಸುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಪ್ರಾರಂಭದಲ್ಲಿ ಮಾತನಾಡಿದ ಏಷ್ಯಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಪಿ. ಮದನ್ ಗೌಡ ಅವರು, ದಿನದ ೨೪ ಗಂಟೆಯೂ ಕರ್ತವ್ಯ ನಿರ್ವಹಿಸುವ ಪತ್ರಕರ್ತರ ಸಂಘಟನೆಯಲ್ಲಿ ಹಿರಿಯ ಪತ್ರಕರ್ತರಾದ ರಾಮು ಮುರಿಗೌಡರು, ಮುನಿಕೃಷ್ಣಪ್ಪ ಅವರನ್ನು ಕಳೆದುಕೊಂಡಿರುವುದು ಪತ್ರಿಕಾ ರಂಗಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ವಿಷಾಧಿಸಿದರು. ವಿವಿಧ ಹುದ್ದೆಗಳನ್ನು ಸಮರ್ಪಕವಾಗಿ ನಿಬಾಯಿಸಿ ತಮ್ಮದೆಯಾದ ಛಾಪು ಮೂಡಿಸಿದ್ದರು ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಬಿ.ಆರ್. ಉದಯ್ ಕುಮಾರ್ ಮಾತನಾಡಿ, ಹಿರಿಯ ಪತ್ರಕರ್ತರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟ ಉಂಟಾಗಿದೆ. ಕೆಲ ತಿಂಗಳಿನಿಂದ ನಾನಾ ಪತ್ರಕರ್ತರನ್ನು ವಿವಿಧ ಕಾರಣಗಳಿಗಾಗಿ ಅಸುನೀಗುತ್ತಿರುವುದು ದುಃಖದ ಸಂಗತಿ ಎಂದು ಇದೆ ವೇಳೆ ನೆನಪಿಸಿಕೊಂಡರು.
ಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಅಧ್ಯಕ್ಷರಾದ ಎಸ್.ಆರ್. ಪ್ರಸನ್ನಕುಮಾರ್ ತಮ್ಮ ಅಧ್ಯಕ್ಷತೆ ನುಡಿಯಲ್ಲಿ ಮಾತನಾಡಿ, ಪತ್ರಕರ್ತರ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದವರು ಮತ್ತು ಎಲ್ಲಾ ಕಾರ್ಯಕ್ರಮಗಳಲ್ಲಿ ಬಾಗಿಯಾಗುತ್ತಿದ್ದವರು. ಸಂಪತ್ ಕುಮಾರ್ ಇವರು ಸಂಸ್ಕೃತ ಪತ್ರಿಕೆಯ ಸಂಪಾದಕರಾಗಿದ್ದರು. ಇಂತಹ ಅನೇಕ ಜನ ಪತ್ರಕರ್ತರು ಅಗಲಿದ್ದು, ಅವರಿಗೆ ದೇವರು ಶಾಂತಿ ಕರುಣಿಸಲಿ ಎಂದು ಕೋರಿದರು.
ಸಂತಾಪ ಸಭೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಿಂದೂ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ನಗರ ಕಾರ್ಯದರ್ಶಿ ಸಿ.ಬಿ. ಸಂತೋಷ್, ರಾಜ್ಯ ಸಣ್ಣ ಪತ್ರಕರ್ತರ ಸಂಘದ ಅಧ್ಯಕ್ಷರಾಧ ಜೆ.ಆರ್. ಕೆಂಚೇಗೌಡ ಇತರರು ಪಾಲ್ಗೊಂಡಿದ್ದರು.