ಕಟ್ಟಡ ಕಾರ್ಮಿಕ ಇಲಾಖೆಯಿಂದ ಅಸಮರ್ಪಕ ಆಹಾರ ಕಿಟ್ ವಿತರಣೆ

ಹಾಸನ : ಕಟ್ಟಡ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ಬಿಡುಗಡೆಯಾದ ಆಹಾರದ ಕಿಟ್ ಗಳನ್ನು ಅಸಮರ್ಪಕವಾಗಿ ಬಿಡುಗಡೆ ಮಾಡಲಾಗಿದ್ದು, ಕೂಡಲೇ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.)ದಿಂದ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.


      ಜಿಲ್ಲೆ ಕಟ್ಟಡ ಕಾರ್ಮಿಕ ಇಲಾಖೆಗೆ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಇಲಾಖೆ ಬಿಡುಗಡೆಗೊಳಿಸಿದ ಸುಮಾರು ೧೦,೦೦೦ ಆಹಾರ ಕಿಟ್ ಗಳನ್ನು ಸ್ಥಳೀಯ ಶಾಸಕರಾದ ಪ್ರೀತಂ ಗೌಡ ಅವರು ತಮ್ಮ ಪಕ್ಷದ ಕಿಟ್ ಗಳೆಂದು ಬಿಂಬಿಸಿ ತಮ್ಮ ಪಕ್ಷದ ಕಾರ್ಯಕರ್ತರ ಮುಖಾಂತರ ತಮಗೆ ಬೇಕಾದವರಿಗೆ ಹಂಚಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಘೋಷಿಸಿರುವ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಕಟ್ಟಡ ಕಾರ್ಮಿಕರಿಗೆ ಸ್ವಲ್ಪಮಟ್ಟಿನ ಆಶ್ವಾಸನೆ ಎಂಬAತೆ ಸರಕಾರ ಆಹಾರ ಕಿಟ್ ಗಳನ್ನು ಕಾರ್ಮಿಕ ಇಲಾಖೆಯ ಮುಖಾಂತರ ನೀಡಿತ್ತು. ಇದನ್ನು ಶಾಸಕರು ತಮ್ಮದೇ ಪಕ್ಷದ ಕಿಟ್ ಗಳೆಂದು ಬಿಂಬಿಸಿ ತಮಗೆ ಬೇಕಾದವರಿಗೆ ಹಂಚಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು ಮತ್ತು ಅಕ್ಷಮ್ಯವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಸರಕಾರದ ಅನುದಾನಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ಹೊಂದಿರುವ ಶಾಸಕರೇ ತಮ್ಮ ನೀಚ ರಾಜಕೀಯಕ್ಕಾಗಿ ಈ ರೀತಿಯ ವರ್ತನೆ ನಡೆಸುವುದಾದರೆ ಜನರು ಎಲ್ಲಿಂದ ನ್ಯಾಯ ನಿರೀಕ್ಷಿಸಲು ಸಾಧ್ಯ? ಈ ಪ್ರಕರಣದಲ್ಲಿ ಶಾಸಕರೊಂದಿಗೆ ಅಧಿಕಾರಿಗಳೂ ಭಾಗಿಯಾಗಿರುವುದು ಭಾಸವಾಗುತ್ತಿದೆ. ಅನುದಾನಗಳು ಅರ್ಹರಿಗೆ ತಲುಪಿದಾಗ ಮಾತ್ರ ಸಾಮಾಜಿಕ ನ್ಯಾಯ ಉಂಟಾಗಲು ಸಾಧ್ಯ ಎಂದರು.  

        ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಮಾಡಿದರು.

       ಇದೆ ವೇಳೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಜಿಲ್ಲಾದ್ಯಕ್ಷರಾದ ಸೈಯದ್ ಫರೀದ್, ಪೈರೋಜ್ ಪಾಷಾ, ಗುಳೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ನೂರುಲ್ಲಾ, ಶಜೀಲ್, ಸಫೀರ್  ಇತರರು ಉಪಸ್ಥಿತರಿದ್ದರು.


Post a Comment

Previous Post Next Post