ಹಾಸನ: ನಗರಸಭೆಯಲ್ಲಿ ಕೆಲಸ ಮಾಡುವ ವಾಟರ್ ಮೆನ್, ನೀರುಗುಂಟೆಗಳು, ಯುಜಿಡಿ ಕೆಲಸಗಾರರು ಹಾಗೂ ಇತರೆ ಕೆಲಸಗಾರರಿಗೆ ಉದ್ಯಮಿ ಹರ್ಷವರ್ಧನ್ ಗೌಡ ಅವರು ದಿನನಿತ್ಯ ಉಪಾಯೋಗಿಸುವ ಆಹಾರದ ಕಿಟ್ ಗಳನ್ನು ನಗರಸಭೆ ಅಧ್ಯಕ್ಷರಾದ ಮೋಹನ್ ಮೂಲಕ ವಿತರಣೆ ಮಾಡಲಾಯಿತು.
ನಂತರ ಮಾತನಾಡಿದ ನಗರಸಭೆ ವಾಟರ್ ಮೆನ್ ಸಂಘದ ಅಧ್ಯಕ್ಷ ಆನಂದ್ ಗಿರಿ ಅವರು, ಇತರರಿಗೆ ವೇತನ ಹೆಚ್ಚು ಮಾಡುವಂತೆ ವಾಟರ್ ಮೆನ್, ನೀರುಗುಂಟೆಗಳು, ಯುಜಿಡಿ ಕೆಲಸಗಾರರು ಹಾಗೂ ಇತರೆ ಕೆಲಸಗಾರರ ವೇತನವನ್ನು ಕೂಡ ವರ್ಚಕ್ಕೊಮ್ಮೆ ಹೆಚ್ಚು ಮಾಡಬೇಕು. ಕಳೆದ ಐದಾರು ವರ್ಷಗಳು ಕಳೆದರೂ ಅದೆ ವೇತನವನ್ನು ಕೊಡಲಾಗುತ್ತಿದೆ. ಸಂಬಳವನ್ನು ಕೂಡ ನಿಗಧಿತ ದಿನಾಂಕದಲ್ಲಿ ಕೊಡುತ್ತಿಲ್ಲ. ಯಾವುದೇ ಸೌಲಭ್ಯಗಳು ಕೂಡ ಸಿಗುತ್ತಿಲ್ಲ. ನಗರಸಭೆ ನೂತನ ಅಧ್ಯಕ್ಷರು ನಮ್ಮ ಬಗ್ಗೆ ಗಮನ ನೀಡಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಡಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷರಾದ ಮೋಹನ್ ಅವರು ಮಾತನಾಡುತ್ತಾ, ವಾಟರ್ ಮೆನ್, ನೀರುಗುಂಟೆಗಳು, ಯುಜಿಡಿ ಕೆಲಸಗಾರರು ಹಲವಾರು ವರ್ಷಗಳಿಂದಲೂ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಿಮ್ಮ ಬೇಡಿಕೆಯಂತೆ ೧೫ ವರ್ಷ ಸೇವೆ ಸಲ್ಲಿಸಿದವರನ್ನು ನೇರವಾಗಿ ನೇಮಕ ಮಾಡುವ ಬಗ್ಗೆ ಯೋಚನೆ ಮಾಡಲಾಗಿದೆ. ಮತ್ತು ಯೂನಿಫಾರಂ ಕೊಡುವ ಬಗ್ಗೆ ಹಾಗೂ ಇತರೆ ಬೇಡಿಕೆಗಳನ್ನು ಸಭೆಯಲ್ಲಿ ಎಲ್ಲಾ ಸದಸ್ಯರ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದಕ್ಕೆ ಕೈಜೋಡಿಸಲಾಗುವುದು ಎಂದು ಭರವಸೆ ನೀಡಿದರು.
ಲಾಕ್ ಡೌನ್ ಆವರಿಸಿದ ಹಿನ್ನಲೆಯಲ್ಲಿ ಬಡ ವರ್ಗದವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಕೈಲಾದ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರತಿನಿತ್ಯ ಉಪಾಯೋಗಿಸುವ ಆಹಾರದ ಕಿಟ್ ಗಳನ್ನು ವಿತರಣೆ ಮಾಡುತ್ತಿರುವುದಾಗಿ ಹೇಳಿದರು.
ಇದೆ ವೇಳೆ ಉದ್ಯಮಿ ಹರ್ಷವರ್ಧನ್ ಗೌಡ, ನಗರಸಭೆ ಉಪಾಧ್ಯಕ್ಷೆ ಮಂಗಳಾ ಪ್ರದೀಪ್, ಹಿರಿಯ ಪತ್ರಕರ್ತರಾದ ಮಂಜು ಬನವಾಸೆ, ವೇಣುಕುಮಾರ್, ನಾಗರಾಜು ಹೆತ್ತೂರ್, ಸ್ವಾಗತ್, ಬ್ಯಾಕರವಳ್ಳಿ ವೆಂಕಟೇಶ್, ಪ್ರವೀಣ್, ನವೀನ್ ಇತರರು ಪಾಲ್ಗೊಂಡಿದ್ದರು.