ಚನ್ನರಾಯಪಟ್ಟಣ: ತೆಂಗು ಬೆಳೆಯಲ್ಲಿ ಕಂಡುಬರುವ ರೋಗಗಳ ಬಗ್ಗೆ ಜಾಗೃತಿಯನ್ನು ವಿದ್ಯಾರ್ಥಿ ಸಹನ ನೀಡಿದರು.
ಕೋವಿಡ್-19 ಕಾರಣದಿಂದ ಶಾಲಾ ಕಾಲೇಜು ಆನ್ಲೈನ್ ಲ್ಲಿ ನಡೆಯುತ್ತಿವೆ. ಆದರೆ ಕೃಷಿ ಮತ್ತು ತೋಟಗಾರಿಕ ವಿಶ್ವವಿದ್ಯಾಲಯಗಳು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ನಮ್ಮ ನಮ್ಮ ಊರುಗಳಲ್ಲೇ ರೈತರಿಗೆ ಕೃಷಿ ಜಾಗೃತಿ ಮೂಡಿಸಲು ಅವಕಾಶ ಕಲ್ಪಿಸಲಾಗಿದೆ.
ಬಿದರೆ ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತೆಂಗು ಮುಖ್ಯ ಬೆಳೆಯಾಗಿದೆ.ಇದರಲ್ಲಿ ಇತ್ತೀಚಿಗೆ ರೋಗ ಗಳು ಹೆಚ್ಚಾಗಿ ಕಂಡು ಬಂದಿರುವುದರಿಂದ ತೆಂಗು ಬೆಳೆಯಲ್ಲಿ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ ವಿಷಯದ ಕುರಿತು ಸರ್ಕಾರಿ ಪ್ರಾಥಮಿಕ ಶಾಲೆ ಬಿದರೆ ಆವರಣದಲ್ಲಿ ಜಾಗೃತಿ ಮುಡಿಸಲಾಯಿತು.