ಮೃತ ಮಂಗಗಳ ಅಂತ್ಯ ಸಂಸ್ಕಾರ ನಡೆಸಿದ ಅಧಿಕಾರಿಗಳು-ಭಜರಂಗದಳ ಕಾರ್ಯಕರ್ತರು

ಬೇಲೂರು: ದುರುಳರಿಂದ ಹತ್ಯೆಗೀಡಾದ 38  ಮಂಗಗಳ ಅಂತ್ಯ ಸಂಸ್ಕಾರವನ್ನು ಇಂದು ಸಂಜೆ ತಾಲ್ಲೂಕಿನ ತಗರೆ ಅರಣ್ಯ ಪ್ರದೇಶದಲ್ಲಿ ನಡೆಸಲಾಯಿತು.


ದೊಡ್ಡದಾದ ಗುಂಡಿಯನ್ನು ತೋಡಿ ಬಿಳಿಬಟ್ಟೆ ಇಟ್ಟು ಪೂಜೆ ಸಲ್ಲಿಸಿ ಒಂದೊಂದೇ ಮಂಗವನ್ನು ಜೋಡಿಸಿಟ್ಟು ಸಂಸ್ಕಾರ ನಡೆಸಲಾಯಿತು. ಈ ಸಂದರ್ಭ ಅರಣ್ಯ ಇಲಾಖೆಯ ಹಾಸನ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಐಬಿ. ಪ್ರಭು, ಸಕಲೇಶಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿಎನ್.ಸುರೇಶ್, ಸಿಪಿಐ ಶ್ರೀ ಕಾಂತ್, ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ, ಅರೇಹಳ್ಳಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಗುರುಪ್ರಸಾದ್, ಭಜರಂಗದಳದ ಪ್ರಮುಖರಾದ ಸಕಲೇಶಪುರದ ರಘು, ತಾಲ್ಲೂಕು ಸಂಚಾಲಕ ಮಂಜುನಾಥ್ ಹಾಗೂ ಗ್ರಾಮಸ್ಥರು ಇದ್ದರು.

Post a Comment

Previous Post Next Post