ಬೆಂಗಳೂರು/ ಬೇಲೂರು: ರಾಜಧಾನಿ ಬೆಂಗಳೂರಿನ ವಿಧಾನಸೌದಧ ಎದಿರು ನಾಡಪ್ರಭು ಮಾಗಡಿ ಕೆಂಪೇಗೌಡರ ಪುತ್ಥಳಿ ಸ್ಥಾಪಿಸುವಂತೆ ಮಾಗಡಿ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ರಾಜ್ಯ ಒಕ್ಕಲಿಗರ ಮಹಿಳಾ ಒಕ್ಕೂಟ ಪದಾಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷೆ ಸುರಭಿರಘು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕೂಟದ ಪದಾಧಿಕಾರಿಗಳು, ಪ್ರಮುಖರು ಒಕ್ಕೂಟದ ಅಧ್ಯಕ್ಷೆ ಭಾರತಿಶಂಕರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೆವು. ನಾಡಪ್ರಭು ಕೆಂಪೇಗೌಡರ ಪಾರಂಪರಿಕ ಸ್ಥಳಗಳ ಅಭಿವೃದ್ಧಿ ಪ್ರಾಧಿಕಾರ ಹಾಗೂ ಒಕ್ಕಲಿಗರ ನಿಗಮ ಸ್ಥಾಪಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ ನಂತರ ವಿಧಾನಸೌದಧ ಎದಿರು ಕೆಂಪೇಗೌಡರ ಪುತ್ಥಳಿ ಅನಾವರಣಗೊಳಿಸುವಂತೆ ಪತ್ರದ ಮೂಲಕ ಕೋರಿದ್ದೇವೆ.
ಕ್ರಾಂತಿಯೋಗಿ ಬಸವಣ್ಣ ಅವರ ಪುತ್ಥಳಿ ಸ್ಥಾಪನೆ ನಮಗೆ ಸಂತಸ ತಂದಿಗೆ. ನಾಡಪ್ರಭು ಕೆಂಪೇಗೌಡರ ಪುತ್ಥಳಿ ಸ್ಥಾಪಿಸಬೇಕೆಂಬುದು ರಾಜ್ಯದ ಜನರ ಆಶಯವಾಗಿದೆ ಎಂಬುದನ್ನು ಮನವರಿಕೆ ಮಾಡಿದ್ದೇವೆ ಎಂದು ಹೇಳಿದರು.ಮುಖ್ಯಮಂತ್ರಿ ಭೇಟಿ ವೇಳೆ, ಭುವನೇಶ್ವರಿ ಮಹಿಳಾ ಒಕ್ಕಲಿಗರ ಸಂಘದ ಮಹದೇವಮ್ಮಕೃಷ್ಣಯ್ಯ, ಸಿರಿಗಂಧ ಒಕ್ಕಲಿಗರ ಮಹಿಳಾ ಸಂಘದ ಸೌಭಾಗ್ಯ ಆನಂದ್, ಆದಿಚುಂಚನಗಿರಿ ಮಹಿಳಾ ಒಕ್ಕಲಿಗರ ಸಂಘದ ಇಂದಿರಾರಮೇಶ್ ಇತರರು ಇದ್ದರೆಂದರು.
![]() |
ಗರ್ಭಾವಸ್ಥೆ ಸಮಯದಲ್ಲಿ ಕೋವಿಡ್-19 ಲಸಿಕಾಕರಣ |