ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಕುಟುಂಬ ಕಲ್ಯಾಣ ಯೋಜನೆಗಳ ಬಗೆಗೆ ಮಾಹಿತಿ ಕಾರ್ಯಕ್ರಮ

ಬೇಲೂರು / ಹಗರೆ : ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಹಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಟುಂಬ ಕಲ್ಯಾಣ ವಿಧಾನಗಳ ಪ್ರದರ್ಶನ ಮತ್ತು ಮಾಹಿತಿ ಹಂಚಿಕೆ ಮತ್ತು ಸರ್ಕಾರದಿಂದ ಲಭ್ಯವಿರುವ ಎಲ್ಲಾ ಯೋಜನೆಗಳನ್ನು ಪ್ರದರ್ಶಿಸಿ ತದನಂತರ ಆಶಾ ಕಾರ್ಯಕರ್ತೆಯರು ಒಂದೊಂದರ ಉಪಯೋಗ ಅಡ್ಡ ಪರಿಣಾಮಗಳ ಬಗೆಗೆ ಮಾಹಿತಿ ನೀಡಿ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಯಿತು.

 ಜನರ ಮನಸ್ಸಲ್ಲಿ ಸಾಮಾನ್ಯವಾಗಿ ಕುಟುಂಬ ಕಲ್ಯಾಣ ಯೋಜನೆಗಳ ಬಗೆಗಿರುವ ಗೊಣದಲಗಳು ಹಾಗೂ ಪ್ರಶ್ನೆಗಳಿಗೆ ಉತ್ತರಿಸಿ , ಕಾರ್ಯಕ್ರಮದ ಅಂಗವಾಗಿ ಈ ತಿಂಗಳು ಎರಡು ಫಲಾನುಭವಿಗಳಿಗೆ ವಂಕಿ, ಆರು ಫಲಾನುಭವಿಗಳಿಗೆ ಅಂತರ ಇಂಜೆಕ್ಷನ್ ನೀಡಲಾಗಿದ್ದು ಕ್ಷೇತ್ರಮಟ್ಟದಲ್ಲಿ ನಿರೋಧ್‌, ಮಾಲಾ ಎನ್‌, ಛಾಯಾ ಮಾತ್ರೆ ನೀಡಲಾಗಿದೆ.

ಸುರಕ್ಷಿತ ಗರ್ಭಪಾತ ಸೇವೆ ಮತ್ತು ಕುಟುಂಬ ಕಲ್ಯಾಣ ಯೋಜನೆಗಳು ನಿರಂತರವಾಗಿ ಉಚಿತವಾಗಿ ಆರೋಗ್ಯ ಕೇಂದ್ರದಲ್ಲಿ ಲಭ್ಯವಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಕ್ಷೇತ್ರ ಸಿಬ್ಬಂದಿಗಳು ಈ ಕಾರ್ಯಕ್ರಮವನ್ನು ಪ್ರತಿ ಹಳ್ಳಿಯಲ್ಲಿ ಆಯೋಜಿಸಿ ಜನರಿಗೆ ಮಾಹಿತಿ ನೀಡಬೇಕು ಎಂದು  ವೈದ್ಯಾಧಿಕಾರಿ ಡಾ.ಶಾಲಿನಿ ವಿ.ಎಲ್  ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಇದ್ದರು.

Post a Comment

Previous Post Next Post