ಬೇಲೂರು : `ವಿಪತ್ತಿನಲ್ಲಿಯೂ ಕುಟುಂಬ ಯೋಜನೆಯ ಸೇವೆ, ತಯಾರಿ,ಸ್ವಾವಲಂಬಿ ರಾಷ್ಟ್ರ ಮತ್ತು ಕುಟುಂಬಕ್ಕೆ ನಾಂದಿ' ಎಂಬ ಈ ವರ್ಷದ ಘೋಷ ವಾಕ್ಯದೊಂದಿಗೆ ಆರೋಗ್ಯ ಶಿಕ್ಷಣ ನೀಡುವ ಮೂಲಕ ಸಮುದಾಯದಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಕಿರು ನಾಟಕದ ಮೂಲಕ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಯಿತು.
![]() |
ಬೇಲೂರು ತಾಲ್ಲೂಕು ಅರೇಹಳ್ಳಿಯಲ್ಲಿ ವಿಶ್ವಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು |
ಫಲಾನುಭವಿಗಳಿಂದಲೇ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. "ಚಿಕ್ಕ ಸಂಸಾರ ಚೊಕ್ಕ ಸಂಸಾರ"ಎಂಬ ಕಥೆಯನ್ನು ಆಧರಿಸಿ ಕಿರು ನಾಟಕದ ಮೂಲಕ ಎಲ್ಲಾ ಕುಟುಂಬ ಕಲ್ಯಾಣಯೋಜನೆಗಳ ಮಹತ್ವ ಹಾಗೂ ಜನಸಂಖ್ಯಾ ಸ್ಪೋಟದ ದುಷ್ಪರಿಣಾಮಗಳ ಬಗ್ಗೆ ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿಗಳು ಅರಿವು ಮೂಡಿಸಿದರು.
ಕಾರ್ಯಕ್ರಮದ ಉದ್ದೇಶವಾಗಿ ೧೪ ಜನರಿಗೆ ಉದರ ದರ್ಶಕ ಶಸ್ತ್ರ ಚಿಕಿತ್ಸೆ, ೩ ಜನರಿಗೆ ಹೆರಿಗೆಯಾದ ೨೪ ಗಂಟೆಯೊಳಗೆ ಪಿ.ಪಿ ಐ.ಯೂ.ಸಿ.ಡಿ ಮತ್ತು ೩ ಸುರಕ್ಷಿತ ಗರ್ಭಪಾತ, ೧ ಐಯೂಸಿಡಿ ಅಳವಡಿಸಲಾಯಿತು. ೩ ಅರ್ಹ ಫಲಾನುಭವಿಗಳಿಗೆ ಅಂತರ ಚುಚ್ಚುಮದ್ದು ನೀಡಲಾಯಿತು. ಪ್ರಸಕ್ತ ವರ್ಷದಲ್ಲಿ ೨ ಎನ್.ಎಸ್.ವಿ ಕೇಸ್ ಗಳನ್ನು ಸಹ ಮಾಡಿಸಿದ್ದು,ಈ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಪಣ ತೊಡೋಣ, ಎಲ್ಲರೂ ಕೈ ಜೋಡಿಸೋಣ ಎಂದು ವೈದ್ಯಾಧಿಕಾರಿ ಡಾ.ಮಮತಾ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಫಾತೀಮ, ಫಲಾನುಭವಿಗಳು, ಆಶಾಕಾರ್ಯಕರ್ತರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.