ಪ್ರೀತಿ ಪಾತ್ರರಿಗಾಗಿ ಒಂದಿಷ್ಟು ಸಮಯ

ಒಂದು ಜೀವಿಯಾಗಿ ಹುಟ್ಟಿ ಒಬ್ಬಂಟಿಯಾಗಿರಲು ಸಾಧ್ಯವಿಲ್ಲ. ಪ್ರಾಣಿ- ಪಕ್ಷಿಗಳೇ ಆಗಲಿ, ಮನುಷ್ಯರಾದ ನಾವು ನೀವುಗಳೇ ಆಗಲಿ. ಒಂಟಿತನವ ತೊಡೆದುಹಾಕಿ ಸಂಬಂಧ, ಸ್ನೇಹ,  ಪ್ರೀತಿ,  ವಿಶ್ವಾಸ,  ನಂಬಿಕೆ,  ಪರಿಚಯ,  ಹೀಗೆ ಅನೇಕ ಆಯ್ಕೆಗಳ ಮೂಲಕ ಸಹ ಜೀವಿಯಾಗಿ ಸಂಧಿಸಿ ನಾವುಗಳು ಜೀವಿಸುತ್ತೇವೆ. 

 ಸಮಯ ಸಾಗುತ್ತಾ ಸರಿದು ಹೋಗುವ ಜೊತೆಗೆ ಈ ಜೀವದ ಜೀವನವು ಸರಾಗವಾಗಿ ಮುಂದೆ ಹೋಗುತ್ತಿದೆ. ಹುಟ್ಟಿ ಸಾಧಿಸಿ ಚಿತ್ತದಲ್ಲಿ ಉಳಿಯುವವರ ನಡುವೆ ಸಂಬಂಧವನ್ನೇ ಸರಿದೂಗಿಸಿಕೊಂಡು ಸುತ್ತಮುತ್ತಲಿನವರ ಸಂತೋಷದಲ್ಲೇ ಸಾಧನೆ ನೋಡುತ್ತಿರುವವರು ಹಲವಾರು ಜನ. ಅಂತಹ ಹಲವಾರು ಜನರು ನಮ್ಮ ಸುತ್ತಲೂ ಇದ್ದಾರೆ. ತಂದೆ-ತಾಯಿ,  ಅಜ್ಜ-ಅಜ್ಜಿ, ನೆರೆಹೊರೆಯವರು,  ಸಂಬಂಧಿಕರು,  ಸ್ನೇಹಿತರು, ಪ್ರೀತಿಪಾತ್ರರು ಹೀಗೆ ಅನೇಕ........

ಯಾರು ಯಾರಿಂದಲೂ ಯಾರು ಯಾರಿಂದಲೂ ಏನನ್ನೂ ಅಪೇಕ್ಷಿಸದೆ ಇದ್ದರು ಸಮಯ, ಪ್ರೀತಿ,  ಕಾಳಜಿ,  ಮಾತು, ಇವುಗಳನ್ನು ಬಯಸುವುದು ಸರ್ವೇಸಾಮಾನ್ಯ. ವಯಸ್ಸಾದ ಹಿರಿಯರಿಗೆ ಕಿರಿಯರ ಪ್ರೀತಿಯೇ ಆಸ್ತಿ. ಮಕ್ಕಳು ಮೊಮ್ಮಕ್ಕಳನ್ನು ಬೆರೆತು ಕೂಡಿ ಸಂವಹನ ನಡೆಸುವುದೇ ಪ್ರೀತಿ. ಇಂತಹ  ಪ್ರೀತಿ ಪಾತ್ರರಿಗೆ ಸಮಯ ನೀಡಿದರೆ ಕಳೆದುಕೊಳ್ಳುವುದಾದರೂ ಏನು?.

           ಯಾವಾಗಲೂ ನಮ್ಮ ಸಂತೋಷಕ್ಕೆ ಮಾನ್ಯತೆ  ಕೊಡುವ ಬದಲು ಕೆಲವೊಮ್ಮೆ ಇತರರ ಖುಷಿಗೂ ಪ್ರಾಮುಖ್ಯತೆ ನೀಡಿದರೆ ನಮ್ಮಿಂದ ಅವರ ಮನಸ್ಸು ಸಂತೋಷದಿ ಹಗುರಾಗುವುದರಲ್ಲಿ ಸಂದೇಹವಿಲ್ಲ.   ಮನರಂಜನೆಗಾಗಿ ಅನೇಕ ಮಾರ್ಗಗಳನ್ನು ಕಂಡು ಕೊಂಡಿರುವ ಯುವಜನತೆಯು ಹಿಂದಿನ ಪೀಳಿಗೆಯವರ ಮನಸ್ಸಿನ ಸ್ಥಿತಿ, ಅವರ ಸುಖ ದುಃಖಗಳ ಬಗ್ಗೆ ಯೋಚಿಸಿದಾಗ ಅವರ ಒಡನಾಟದ ತವಕ ನಮಗೆ ಗೋಚರಿಸುವುದು ಎನಿಸುತ್ತದೆ. ಕೇವಲ ಟಿವಿ, ಮೊಬೈಲ್,  ಕಂಪ್ಯೂಟರ್,  ವಿಡಿಯೋ ಗೇಮ್ಸ್, ಅಂತರ್ಜಾಲ,  ಇವುಗಳಲ್ಲಿ ಮುಳುಗಿ ಸಮಯ ಹಾಳು ಮಾಡುವುದರ ಬದಲು ಅಮೂಲ್ಯ ಸಮಯವನ್ನು  ಆತ್ಮೀಯರಿಗಾಗಿ ನೀಡಿದಾಗ ಆ ಸಮಯಕ್ಕೆ ಒಂದು ಅರ್ಥ ಬಂದಂತಾಗುತ್ತದೆ ಅಲ್ಲವೇ?.

      ಏನೇ ಆಗಲಿ ಜೀವ ಎಂಬುದು ಒಂದೇ ಅಂತೆಯೇ ಜೀವನವು ಒಂದೇ. ಸುಖ-ದುಃಖಗಳು ನಮ್ಮಲ್ಲಿರುವಂತೆ ಇದ್ದರೂ ಅದು ಸಮಯದ ಬಿಗಿಮುಷ್ಟಿಯಲ್ಲಿ ಇರುತ್ತದೆ. ಅದನ್ನು ಪರಿಪೂರ್ಣವಾಗಿ ಬಳಸಿಕೊಂಡು ನಮ್ಮ ಮತ್ತು ನಮ್ಮವರ ಸಂತೋಷದ ಡಗೆ ಅದನ್ನು ಹಿಗ್ಗಿಸಬೇಕು. ನಾವು ಖುಷಿಯಾಗಿರಬೇಕು ನಮ್ಮವರನ್ನು ಖುಷಿಯಾಗಿ ಇರಿಸಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ.

         'ಸರಿಯುವ ಸಮಯವಿದು'

          'ಸರಿಯಾಗಿ ಬಳಸುವುದು'

          'ಸಂಭವವಿದೆ ಸಂತಸದಿ ಇಡಲು'

          'ಸವೆಯುವ ಜೀವಗಳನ್ನು'.

~ಶಶಿ,ಎಂ.ಟಿ ಮಂಡಲಮನೆ


Advertisement


Post a Comment

Previous Post Next Post