ಬೇಲೂರು: ಹಳೇಬೀಡು-ಬೇಲೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಪುರಸಭೆ ಮಾಜಿ ಅಧ್ಯಕ್ಷ, ಜಾ.ದಳ ತಾಲ್ಲೂಕು ಕಾರ್ಯಾಧ್ಯಕ್ಷ, ಹಿಂದುಳಿದ ವರ್ಗಗಳ ತಾಲ್ಲೂಕು ಒಕ್ಕೂಟದ ಮಾಜಿ ಅಧ್ಯಕ್ಷ, ನಿವೃತ್ತ ಜಿಲ್ಲಾ ರಿಜಿಸ್ಟ್ರಾರ್, ಕಲಾವಿದ ಬಿ.ಸಿ.ಮಂಜುನಾಥ್ಇವರ ನಿಧನಕ್ಕೆ ಜಾ.ದಳದಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ದಿವಂಗತರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಲಿಂಗೇಶ್ ಸೇರಿದಂತೆ ವಿವಿಧ ಗಣ್ಯರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಇದೆ ವೇಳೆ ಕೊರೊನಾ ವಾರಿಯರ್ಸ್ ಆಗಿ 24 ಗಂಟೆ ಸೇವೆ ಸಲ್ಲಿಸುತ್ತಿರುವ ನೂರ್ ಅಹ್ಮದ್ ಅವರ 24x7 ತಂಡದಸದಸ್ಯರನ್ನು ಗೌರವಿಸಲಾಯಿತು. ಕೊರೊನಾದಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಜಾ.ದಳದಿಂದ 5 ಸಾವಿರ ರೂ. ನೆರವು ಹಾಗೂ ಹಣ್ಣು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್,ಬಿ.ಸಿ.ಮಂಜುನಾಥ್ ಪಕ್ಷಕ್ಕೆ ಸೇರ್ಪಡೆ ಆಗುವ ಮುಂಚಿನಿಂದಲೂ ಪಕ್ಷಕ್ಕೆ ಸಹಕಾರ ನೀಡುತ್ತಿದ್ದವರು. ಜಾತಿ ರಹಿತವಾಗಿ ಹಿಂದುಳಿದ ವರ್ಗದವರನ್ನು ಒಗ್ಗೂಡಿಸಲು ಒಕ್ಕೂಟ ರಚಿಸಿದವರು.
ಕನಕದಾಸನ ಭಕ್ತರಾಗಿದ್ದವರು. ದೇವಾಲಯ,ಗುಡಿಗೋಪುರಗಳ ನಿರ್ಮಾಣದ ವೇಳೆ ನೆರವುನೀಡುತ್ತಿದ್ದರು. ಅಂತರಘಟ್ಟಮ್ಮ ದೇಗುಲದ ನಿರ್ಮಾಣಜವಾಬ್ದಾರಿ ಹೊತ್ತು ನಿಧನದ ಕೆಲವೆ ದಿನಗಳ ಮುಂಚೆ ಲೋಕಾರ್ಪಣೆ ಮಾಡಿದ ಹೆಗ್ಗಳಿಕೆ ಇದೆ. ಇಡಿ ಕುಟುಂಬ ರಾಜಕಾರಣದ ಕುಟುಂಬವಾಗಿದೆ. ಈ ನಡುವೆ ದಿವಂಗತರ ಪುತ್ರ ಸಂತೋಷ್ ಜಿ.ಪಂ.ಚುನಾವಣೆಯಲ್ಲಿ ಹಾಗೂ ಪುತ್ರಿ ಸೌಮ್ಯ ಪುರಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದು ನೋವಿನ ಸಂಗತಿಯಾಗಿದೆ. ಇದರ ಬಗ್ಗೆ ಧೃತಿಗೆಡುವ ಅಗತ್ಯವಿಲ್ಲ. ಒಳ್ಳೆಭವಿಷ್ಯವಿದೆ ಎಂದು ಹೇಳಿದರು.
ತಾ.ಜಾ.ದಳ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮಾತನಾಡಿ, ದಿವಂಗತ ಬಿ.ಸಿ.ಮಂಜುನಾಥ್ ಕ್ರೀಡಾಪಟುವಾಗಿದ್ದರು.ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಆರಂಭಿಸಿ ನಂತರ ಕೆಪಿಎಸ್‍ಸಿ ಪರೀಕ್ಷೆ ಬರೆದು ನೋಂದಣಾಧಿಕಾರಿ ಕಚೇರಿಗೆ ಪ್ರಥಮದರ್ಜೆ ಸಹಾಯಕವಾಗಿ ಕೆಲಸಕ್ಕೆ ಸೇರ್ಪಡೆಗೊಂಡರು.
ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಂಡ ಅವರು ನೆಗೆಟೀವ್ಎಂದು ಹೇಳಿದರಾದರೂ ನಂತರದ ದಿನದಲ್ಲಿ ಪಾಸಿಟೀವ್ ಬಂದಿತು.ಆನಂತರ ಸಂಪರ್ಕವಿಲ್ಲದಂತಾಯಿತು. ಸಾರ್ವಜನಿಕವಾಗಿ ಉತ್ತಮ ಕೆಲಸಗಳ ಮಾಡಿರುವ, ಧಾನಿಗಳೂ ಆಗಿರುವ ಮೃತರ ಪತ್ನಿ ಹಾಗೂ ಪುತ್ರರು ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಜಿ.ಪಂ.ಸದಸ್ಯೆ ಲತಾಮಂಜೇಶ್ವರಿ, ಮಾಜಿ ಅಧ್ಯಕ್ಷೆ ಜಿ.ಟಿ.ಇಂದಿರಾಧರ್ಮಪ್ಪ, ಜಿಲ್ಲಾ ಜಾ.ದಳ ಮಾಜಿ ಅಧ್ಯಕ್ಷ ರಾಜಶೇಖರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಎ.ನಾಗರಾಜ್, ತಾ.ಪಂ.ಮಾಜಿ ಅಧ್ಯಕ್ಷ ಕಮಲಚನ್ನಪ್ಪ, ಬಲ್ಲೇನಹಳ್ಳಿರವಿ, ಮೃತರ ಸಹೋದರಿ ಲೀಲಾಪುಟ್ಟೇಗೌಡ, ಪ್ರಮುಖರಾದ ದೊಡ್ಡವೀರೇಗೌಡ, ಮೊಗಪ್ಪಗೌಡ,ಕನಾಯಕನಹಳ್ಳಿಮಹಾದೇವ್, ಪುತ್ರಿ ಸೌಮ್ಯ ಮಾತನಾಡಿದರು.
ಎರಡು ನಿಮಿಷ ಮೌನ ಆಚರಿಸಲಾಯಿತು. ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಹೆಚ್.ಮಹೇಶ್ ನಿರೂಪಿಸಿದರು, ಕಮಲಚನ್ನಪ್ಪ ಪ್ರಾರ್ಥಿಸಿದರು.ಪುರಸಭೆ ಸದಸ್ಯ ಶ್ರೀನಿವಾಸ್, ಮಾಜಿ ಉಪಾಧ್ಯಕ್ಷೆ ಜಯಶ್ರೀಗುರುರಾಜ್, ನಾಗಮ್ಮ, ಮೃತರ ಪುತ್ರ ಉಧ್ಯಮಿ ಸಂತೋಷ್, ಎಪಿಎಂಸಿ ಅಧ್ಯಕ್ಷ ಅದ್ದೂರಿಕುಮಾರ್ ಇತರರು