ಹಾಸನ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಬಳಿ ಭೂ ಕುಸಿತ ಉಂಟಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಮಂಗಳೂರಿಗೆ ತೆರಳುವವರು ಬೇಲೂರು ಮೂಲಕ ಚಾರ್ಮಾಡಿ ಘಾಟ್‌ನಲ್ಲಿ ತೆರಳುವಂತೆ ಸೂಚನೆ ನೀಡಲಾಗಿದ್ದು. ಮೂಡಿಗೆರೆ, ಹಾನುಬಾಳು, ಕೊಟ್ಟಗೆಹಾರದ ಮೂಲಕ ಬದಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೆಳಿಗ್ಗೆ ಭೂಕುಸಿತವಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ದುರಸ್ತಿ ಉದ್ದೇಶಗಳಿಂದ ರಸ್ತೆ ಮಾರ್ಗವನ್ನು 4 ದಿನಗಳ ಕಾಲ ಬಂದ್ ಆಗಲಿದ್ದು ಪ್ರಯಾಣಿಕರು ಬದಲಿ ಮಾರ್ಗದಲ್ಲಿ ತೆರಳುವಂತೆ ಹಾಸನ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
Tags
ಸಕಲೇಶಪುರ