ಬೇಲೂರು : ಇಲ್ಲಿನ ತಾಲೂಕು ಆಡಳಿತದಿಂದ ಪಟ್ಟಣದ ಬಿಇಓ ಕಚೇರಿ ಆವರಣದಲ್ಲಿ ಇರುವ ಮಾಧ್ಯಮಿಕ ಶಾಲಾ ಕಟ್ಟಡದಲ್ಲಿ ಕೊರೋನಾ ಲಸಿಕೆ ನೀಡಲಾಗುತ್ತಿದ್ದು ಲಸಿಕೆ ಪಡೆಯುವವರು ಕೆಸರಿನ ನಡುವೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.
ಲಸಿಕೆ ನೀಡುವ ಸ್ಥಳಕ್ಕೆ ತೆರಳುವಾಗ ಶಾಲೆಯ ಅಟದ ಮೈಧಾನ ದಾಟಿಕೊಂಡು ಹೋಗಬೇಕಾಗಿದೆ. ಆದರೆ ಮೈದಾನವು ಮಳೆಯ ಕಾರಣ ಕೆಸರಿನ ಗದ್ದೆಯಂತಾಗಿದೆ.ಬಿಇಓ ಕಚೇರಿಯ ಗೇಟ್ ದಾಟಿದ ನಂತರ ಲಸಿಕೆ ಕೇಂದ್ರದವರೆಗೂ ಕೆಸರು ತುಂಬಿರುವುದರಿಂದ ನಡೆದು ಹೋಗಲು ಹಾಗೂ ವಾಹನ ಸಂಚಾರಕ್ಕೂ ಬಾರೀ ತೊಂದರೆ ಉಂಟಾಗಿದೆ. ಲಸಿಕೆ ಪಡೆಯಲು ಬಂದ ಕೆಲವರು ಜಾರಿಬಿದ್ದಿರುವುದು ಉಂಟು,ಈ ಸ್ಥಳ ಆಟದ ಮೈದಾನವಾಗಿರುವುದರಿಂದ ಮಳೆಯ ಕಾಲದಲ್ಲಿ ಕೆಸರು ಉಂಟಾಗುವುದು ಸಹಜವಾದರೂ ಲಸಿಕೆ ಕೇಂದ್ರವನ್ನು ಬೇರೆಡಗೆ ಸ್ಥಳಾಂತರಿಸುವ ಬಗ್ಗೆ ಆಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಏಕೆ ಯೋಚಿಸುತ್ತಿಲ್ಲ ಎಂಬುವುದು ಪ್ರಶ್ನೆ ಯಾಗಿದೆ.
ಇದು ಮಳೆಯ ಕಾಲವಾದ್ದರಿಂದ ಇನ್ನೂ ಹಲವು ದಿನಗಳು ಮಳೆ ಬರುವ ಸಾಧ್ಯತೆಇದ್ದು ಮೈದಾನದಲ್ಲಿ ಇನ್ನಷ್ಟು ಕೆಸರು ತುಂಬಲಿದ್ದು ಜೊತೆಯಲ್ಲಿ ಮಳೆಯ ನೀರು ಸಂಗ್ರಹವಾಗಲಿದೆ.ಇದರ ನಡುವೆ ಲಸಿಕೆ ತೆಗೆದು ಕೊಳ್ಳಲು ಹೋಗುವುದು ಕಷ್ಟದ ಕೆಲಸ ಅದರಲ್ಲೂ ವಯೋವೃದ್ದರು ,ಪ್ರಯಾಸದ ನಡುವೆ ಮತ್ತೊಬ್ಬರನ್ನು ಅವಲಂಭಿಸಿ ಲಸಿಕೆ ಕೇಂದ್ರಕ್ಕೆ ಹೋಗಿ ಬರುವಂತಾಗಿದೆ.ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಲಸಿಕೆ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
![]() |
| Advertisement |
![]() |
| Advertisement |


