ಶ್ರೀಧರ್ಮಸ್ಥಳ ಸಂಘದಿಂದ ಆರ್ಥಿಕ ಪ್ರಗತಿ: ಜಯರಾಂ


ಬೇಲೂರು;ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಹಳೇಬೀಡು ವಲಯದ ಕಾರ್ಯಕ್ಷೇತ್ರದಲ್ಲಿ ಸ್ವಸಹಾಯ ತಂಡಗಳ ಸಭೆ ನಡೆಸಲಾಯಿತು.

ಬೇಲೂರು ತಾ.ಹಳೇಬೀಡಿನಲ್ಲಿ ಏರ್ಪಡಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಷೇತ್ರದಲ್ಲಿ ಸ್ವಸಹಾಯ ತಂಡಗಳ ಸದಸ್ಯರು ಪಾಲ್ಗೊಂಡಿದ್ದರು

                                      

ಹಳೇಬಿಡು ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ  ಉದ್ಘಾಟನೆಯನ್ನು ಬೇಲೂರು ತಾಲೂಕಿನ ಯೋಜನಾಧಿಕಾರಿ ಶಿಸಂಧ್ಯಾ.ವಿ.ಶೆಟ್ಟಿ ನೆರವೇರಿಸಿ, ಸ್ವಸಹಾಯ ಸಂಘದ ಸದಸ್ಯರು ಸಂಘದ ಚಟುವಟಿಕೆಗೆ ಹೆಚ್ಚಿನ ಒತ್ತು ಕೊಡುವ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಸನದ ಜಿಲ್ಲಾ ನಿರ್ದೇಶಕ ಜಯರಾಂ ವಹಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೂರಾರು ಕುಟುಂಬಗಳು ಇಂದು ಆರ್ಥಿಕವಾಗಿ ಸ್ವಾವಲಂಬನೆಯತ್ತ ಸಾಗಿವೆ. ಶಿಸ್ತುಬದ್ಧ ವ್ಯವಹಾರದಿಂದ ಸದಸ್ಯರಿಗೆ ಹಾಗೂ ಸಂಘದ ಚಟುವಟಿಕೆಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು. ಈ ಸಂದರ್ಭ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘದ ೯೦ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.




Post a Comment

Previous Post Next Post