ಬೇಲೂರು: ತಾಲ್ಲೂಕಿನ ಬಯಲುಸೀಮೆಗಳಾದ ಹಳೇಬೀಡು ಮತ್ತು ಮಾದೀಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿನ ಕೆರೆ-ಕಟ್ಟೆಗಳಿಗೆ ಯಗಚಿ ಜಲಾಶಯದಿಂದ ನೀರು ನೀಡಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ವಿಪಕ್ಷಗಳ ವಿನಾಃಕಾರಣ ಆರೋಪ ಮಾಡಿದ್ದರು.ಆದರೆ ಸ್ವತಃ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ರಣಘಟ್ಟ ಒಡ್ಡು ಪರಿಶೀಲನೆ ನಡೆಸಿ. ಕಾಮಗಾರಿ ನಡೆಸಬಹದು ಎಂದು ಹೇಳಿದ ಗಳಿಗೆಯಿಂದಲೇ ಹೆಚ್.ಡಿ.ಕುಮಾರಸ್ವಾಮಿ ಸಮಿಶ್ರ ಸರ್ಕಾರ ಯೋಜನೆ ಆರಂಭಕ್ಕೆ ಬಜೆಟ್ ನಲ್ಲಿ ರೂ ೧೦೦ ನೀಡಿದ್ದಾರೆ ಎಂದು ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಪಟ್ಟಣದ ಸಮೀಪವಿರುವ ಐತಿಹಾಸಿಕ ವಿಷ್ಣುಸಮುದ್ರ ಕೆರೆ ಧಾರಾಕಾರ ಮಳೆಯಿಂದ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸುವ ಕಾರ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಯಗಚಿ ಜಲಾಶಯದದಿಂದ ಬಯಲುಸೀಮೆಗೆ ನೀರು ಹರಿಸಬೇಕು ಎಂದು ಪುಷ್ಪಗಿರಿ ಮಠಾಧೀಶರ ನೇತೃತ್ವದಲ್ಲಿ ರೈತ ಸಂಘ, ವಿವಿಧ ಮಠಾಧೀಶರು, ಕನ್ನಡ ಪರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ, ನಾನು ಶಾಸಕನಾದ ಬಳಿಕವೇ ರಣಘಟ್ಟ ಯೋಜನೆಗೆ ಸಮಿಶ್ರ ಸರ್ಕಾರದಲ್ಲಿ ರೂ ೧೦೦ ಕೋಟಿ ಮಿಸಲಿಟ್ಟಿದ್ದು, ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರಣಘಟ್ಟ ಯೋಜನೆ ಕಾಮಗಾರಿಗೆ ತಾಂತ್ರಿಕ ಅನುಮೋದನೆ ಮತ್ತು ಟೆಂಡರ್ ಪ್ರಕ್ರಿಯೆ ನಡೆಸಿ ಲ, ಕಾಮಗಾರಿ ಆರಂಭಿಸಲು ಹಸಿರು ನಿಶಾನೆ ತೋರಿಸಿದೆ. ಈ ನಿಟ್ಟಿನಲ್ಲಿ ಹಾಸನ ಲೋಕಸಭಾ ಸಂಸದ ಪ್ರಜ್ವಲ್ ರೇವಣ್ಣನವರ ಸಹಕಾರ ಅತ್ಯಗತ್ಯವಾಗಿದೆ ಎಂದ ಅವರು ಇಲ್ಲಿಗೆ ೯೦೦ ವರ್ಷಗಳ ಹಿಂದೆ ಬೇಲೂರಿನ ವಿಷ್ಣುಸಮುದ್ರ ಕೆರೆ ಮತ್ತು ಹಳೇಬೀಡಿನ ದ್ವಾರಸಮುದ್ರ ಬೃಹತ್ ಕೆರೆಗಳನ್ನು ರಣಘಟ್ಟ ಒಡ್ಡು ಒಂದು ಮಾಡಿತ್ತು. ಸದ್ಯ ಇದೇ ಪ್ರಯತ್ನವನ್ನು ನಮ್ಮ ಅವದಿಯಲ್ಲಿ ಪುನಃ ಎರಡು ಕೆರೆಗಳನ್ನು ಒಂದು ಮಾಡಿ ರೈತಾಪಿ ವರ್ಗಕ್ಕೆ ಅನುಕೂಲ ಮಾಡುವ ಯೋಜನೆ ನಿಜಕ್ಕೂ ಸಂತೋಷ ತಂದಿದೆ ಎಂದರು.
![]() |
Advertisement |
ಹಾಸನ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಮಾತನಾಡಿ, ೧೨ ನೇ ಶತಮಾನದ ವಿಷ್ಣುಸಮುದ್ರ ಕೆರೆಯನ್ನು ನಮ್ಮ ಹಳ್ಳಿಗರು ಇಂದಿಗೂ ಭಿಷ್ಟಮ್ಮನಕೆರೆ ಎಂದು ಕರೆಯುತ್ತಾರೆ. ಅಲ್ಲದೇ ಆಕೆಯ ಗದ್ದುಗೆ ಇಂದಿಗೂ ಕಾಣಬಹುದು, ಕಳೆದ ೬೦ ವರ್ಷ ತೀವ್ರ ಬರಗಾಲದ ಸಂದರ್ಭದಲ್ಲಿ ಎರಡು ಸಾರಿ ಕೆರೆ ಖಾಲಿಯಾಗಿದ್ದನ್ನು ಹೊರತುಪಡಿಸಿ ಇನ್ನಾವುದೇ ವರ್ಷಗಳಲ್ಲಿ ಕೆರೆ ಖಾಲಿಯಾಗಿಲ್ಲ. ಅಲ್ಲದೆ ಶ್ರೀ ಭಿಷ್ಟಮ್ಮನವರಿಗೆ ಗ್ರಾಮದಲ್ಲಿ ದೇಗುಲ ನಿರ್ಮಾಸಿದೆ. ಪ್ರತಿ ವರ್ಷ ವಾಡಿಕೆಯಂತೆ ಜಾತ್ರೆ ಮಹೋತ್ಸವ, ವಿಶೇಷ ಪೂಜೆಗಳು ನಡೆಯುತ್ತಾ ಬಂದಿದೆ. ಪ್ರತಿ ವರ್ಷ ಇಂತಹ ಬೃಹತ್ ಕೆರೆ ಭರ್ತಿಯಾಗುವ ಹಿನ್ನೆಲೆಯಲ್ಲಿ ಬೇಲೂರಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಾನ್ಯ ಶಾಸಕರು ದೋಣಿ ವಿಹಾರ ಸೇರಿದಂತೆ ಪ್ರವಾಸೋದ್ಯಮವನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಬಿ.ಸಿ.ಉಮೇಶ್, ಜೆಡಿಎಸ್ ಮುಖಂಡರಾದ ಅಣ್ಣೇಗೌಡ, ಪ್ರೇಮಣ್ಣ, ಶಾಂತಣ್ಣ ಸೇರಿದಂತೆ ಹತ್ತಾರು ಜನರು ಭಾಗವಹಿಸಿದ್ದರು.
![]() |
ಕೆ.ಎಸ್.ಲಿಂಗೇಶ್ ಶಾಸಕರು ಬೇಲೂರು |
:-ತಾಲ್ಲೂಕಿನ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿದ ಭಾರೀ ಮಳೆಯಿಂದ ರೈತಾಪಿ ವರ್ಗದ ಬಹುತೇಕ ಬೆಳೆಗಳು ಸಂಪೂರ್ಣ ನಾಶವಾಗಿದೆ. ಈ ಬಗ್ಗೆ ಇಲ್ಲಿನ ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ನಾನು ಖುದ್ದು ಪರಿಶೀಲನೆ ನಡೆಸಿದ್ದು, ಮಳೆ ಅಬ್ಬರ ಇಳಿಮುಖವಾದ ಬಳಿಕ ಅಧಿಕಾರಿಗಳಿಂದ ಸರ್ವೆ ನಡೆಸಿ, ಸೂಕ್ತ ಪರಿಹಾರ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗುತ್ತದೆ ಎಂದರು.
![]() |
Advertisement |
![]() |
Advertisement |
![]() |
Advertisement |