ಬೇಲೂರು: ಅಡಗೂರು ಜೈನರ ಗುತ್ತಿಯಲ್ಲಿ ವೀರಸಾಗರ ಮುನಿ ಮಹಾರಾಜರು ಹಾಗೂ ಅಮಿತಂಜನ ಕೀರ್ತಿ ಮಹಾರಾಜರ ಚಾತುರ್ಮಾಸ ವ್ರತಾಚಾರಣೆ ಆರಂಭವಾಯಿತು.
ಆಗಮಿಸಿದ್ದ ಭಕ್ತರ ಮಹಾಮಂತ್ರ ಪಠನದೊಂದಿಗೆ ಮಹಾಕಳಸ ಪ್ರತಿಷ್ಠಾಪನೆ ನೆರವೇರಿತು. ಆಶಾಢ ಮಾಸದ ಶುಕ್ಲ ಏಕಾದಶಿಯಂದು ಆರಂಭವಾದ ಚಾತುರ್ಮಾಸ ಕಾರ್ತಿಕ ಮಾಸದ ದ್ವಾದಶಿಯವರೆಗೆ ಜಗತ್ತಿನ ಸಕಲ ಜೀವರಾಶಿಗಳಿಗೆ ಒಳಿತಾಗಲಿ ಎಂದು ಇಬ್ಬರು ಸಾದುಗಳು ಕಠಿಣ ವ್ರತ ಕೈಗೊಂಡರು. ಒಂದೇ ಕಡೆ ನೆಲಸದೆ ತುಂಡು ಬಟ್ಟೆಗಳನ್ನು ಧರಿಸದೆ ಬಿಸಿಲು ಮಳೆ ಎನ್ನದೆ ವಿಹಾರ ಮಾಡುವ ದಿಗಂಬರ ಜೈನಮುನಿಗಳು ೪ ತಿಂಗಳು ಜೈನರಗುತ್ತಿಯಲ್ಲಿ ನೆಲಸಿ, ಭಕ್ತರಿಗೆ ಧರ್ಮ ಪ್ರವಚನ ಮಾಡುತ್ತಾರೆ.
![]() |
ಅಡಗೂರು ಜೈನರ ಗುತ್ತಿಯಲ್ಲಿ ವೀರಸಾಗರ ಮುನಿ ಮಹಾರಾಜರು ಹಾಗೂ ಅಮಿತಂಜನ ಕೀರ್ತಿ ಮಹಾರಾಜರ ಚಾತುರ್ಮಾಸ ವ್ರತಾಚಾರಣೆ ಮಹಾಕಳಸ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭಗೊಂಡಿತು |
ಈ ಸಂದರ್ಭ ವಿವಿಧ ಆರಾಧನಾ ವಿಧಾನ ಜರುಗುತ್ತವೆ. ಲೋಕಕಲ್ಯಾಣಾರ್ಥ ನಡೆಯುವ ಧಾರ್ಮಿಕ ಕಾರ್ಯಕ್ಕೆ ಜಿನ ಭಕ್ತರು ಸಂಭ್ರಮದಿAದ ಜಿನಭಜನೆ ಮಾಡಿ ಭಕ್ತಿ ಸಮರ್ಪಿಸಿದರು. ಜೈನ ಸಾದುಗಳಿಗೆ ನಮಿಸಿದ ಭಕ್ತರು ಪಾದ ಪ್ರಾಕ್ಷಲನೆ ನಡೆಸಿದರು. ಪ್ರತಿಷ್ಟಾಚಾರ್ಯ ಬೆಂಗಳೂರಿನ ಪ್ರವೀಣ್ ಪಂಡಿತ್ ಹಾಗೂ ಅರ್ಚಕ ಶೀಥಲ್ ಪಂಡಿತ್ ಮಂತ್ರ ಘೋಷದೊಂದಿಗೆ ಪೂಜಾಕಾರ್ಯ ನಡೆಸಿದರು.
ವೀರಸಾಗರ ಮುನಿ ಮಹಾರಾಜರು ಮಾತನಾಡಿ, ಜಗತ್ತಿಗೆ ಶಾಂತಿ ಬಯಸುವುದು ಜೈನ ಧರ್ಮದ ಪ್ರಮುಖ ಉದ್ದೇಶ. ಜೈನ ಧರ್ಮದಲ್ಲಿ ಮುನಿ ಪರಂಪರೆಗೆ ಮಹತ್ವದ ಸ್ಥಾನವಿದೆ. ಚಾತುರ್ಮಾಸ ದಲ್ಲಿ ಮುನಿವರ್ಯರು ಭಕ್ತರ ಏಳಿಗೆಗಾಗಿ ಪ್ರಾರ್ಥಿಸುತ್ತಾರೆ ಎಂದರು. ಅಮಿತಂಜನ ಕೀರ್ತಿ ಮಹಾರಾಜರು ಅಹಿಂಸಾ ತತ್ವದಡಿ ನಡೆಯುವ ಜೈನರಿಗೆ ಚಾತುರ್ಮಾಸ ಪವಿತ್ರ ಆಚರಣಿ. ಚಾತುರ್ಮಾಸ ದಲ್ಲಿ ಸಾದು ಸಂತರ ಪ್ರವಚನ ಕೇಳಿ ಭಕ್ತರು ಪುನೀತರಾಗುತ್ತಾರೆ. ಪೂಜಾ ಕಾರ್ಯದಲ್ಲಿ ಭಾಗವಹಿಸಿ ಪುಣ್ಯ ಶಾಲಿಗಳಾಗುತ್ತಾರೆ ಎಂದರು.
![]() |
Advertisement |
ಜೈನರ ಗುತ್ತಿ ಟ್ರಸ್ಟ್ ಅಧ್ಯಕ್ಷ ಎಂ.ಅಜಿತ್ ಕುಮಾರ್ ಮಾತನಾಡಿ, ಜೈನರ ಗುತ್ತಿಯಲ್ಲಿ ಇಬ್ಬರು ಜೈನ ಮುನಿಗಳು ವಾಸ್ತವ್ಯ ಮಾಡಿ, ಚಾತುರ್ಮಾಸ ಆಚರಿಸುತ್ತಿದ್ದಾರೆ. ಶ್ರವಣಬೆಳಗುಳ ಮಸ್ತಕಾಭಿಶೇಕ ಮಹೋತ್ಸವಕ್ಕೆ ಆಗಮಿಸಿದ್ದ ಮುನಿಗಳು ಜೈನಮುನಿಗಳ ಪಾದಸ್ಪರ್ಶಿಸಿದೆ. ಹೀಗಾಗಿ ಜೈನರಗುತ್ತಿ ಪವಿತ್ರ ಪುಣ್ಯ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ ಎಂದರು.
ವಿದ್ವಾಂಸ ವೀರೇಂದ್ರ ಬೇಗೂರು ಉಪನ್ಯಾಸ ಮಾಡಿದರು. ಟ್ರಸ್ಟ್ ಪದಾಧಿಕಾರಿಗಳಾದ ಬ್ರಹ್ಮದೇವ ಜೈನ್, ಜಿನೇಶ್, ಕೀರ್ತಿಕುಮಾರ್, ಬಿ.ಎ.ರವಿಕುಮಾರ್, ಮುಖಂಡರಾದ ಎ.ಬಿ.ಕಾಂತರಾಜು, ಧವನ್, ಅತುಲ್‌ಜೈನ್, ವಸಂತ, ಕಾಂತರಾಜು, ಪುಷ್ಪರತ್ನರಾಜು, ಎಚ್.ಎಸ್.ಅನಿಲ್‌ಕುಮಾರ್ ಇದ್ದರು.