ಬೇಲೂರು: ಇಲ್ಲಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಇರುವ ಮಯೂರ ವೇಲಾಪುರಿ ಹೊಟೇಲ್ ಬಳಿ ವಿದ್ಯುತ್ ಕಂಬವೊಂದು ಬಾಗಿದ್ದು ಯಾವುದೆ ಸಂದರ್ಭದಲ್ಲಿ ನೆಲಕಚ್ಚುವ ಸಾಧ್ಯತೆಯಿದೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನ ಹಾಗೂ ಜನರು ಸಂಚರಿಸಲಿದ್ದಾರೆ. ಈ ಸ್ಥಳದಲ್ಲಿ ಬ್ಯಾಂಕುಗಳು, ಆಸ್ಪತ್ರೆಗಳು, ಹೊಟೇಲುಗಳು ಇದ್ದು ಜನದಟ್ಟಣೆಯಿಂದ ಕೂಡಿರುತ್ತದೆ.
ಇಂತಹ ಸಂದರ್ಭ ವಿದ್ಯುತ್ ಕಂಬವೇನಾದರೂ ಬಿದ್ದರೆ ಹೆಚ್ಚಿನ ಅನಾಹುತವಾಗಲಿದೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳು ಗಮನಹರಿಸಿ ಕೂಡಲೆ ವಿದ್ಯುತ್ ಕಂಬ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
![]() |
| Advertisement |
Tags
ಬೇಲೂರು

