ಬೇಲೂರು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬೇಲೂರು ಇದರಿಂದ ತಾಲೂಕಿನ ಕಸಬಾ ಎ ವಲಯದ ಕೋಗಿಲೆಮನೆ ಕಾರ್ಯಕ್ಷೇತ್ರದಲ್ಲಿ ಪರಿಸರ ಕಾರ್ಯಕ್ರಮವನ್ನು ನಡೆಸಲಾಯಿತು.
![]() |
ಬೇಲೂರು ತಾಲ್ಲೂಕು ಕೋಗಿಲಮನೆ ಕಾರ್ಯಕ್ಷೇತ್ರದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು |
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಮಾಜಿ ಅಧ್ಯಕ್ಷ ರವಿಚಂದ್ ವಹಿಸಿದ್ದರು.ಕಾರ್ಯಕ್ರಮ ಉದ್ಘಾಟನೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಿರಿಗಡಲು
ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರ್ ನೆರವೇರಿಸಿದರು. ಸಹ ಶಿಕ್ಷಕರು ಪ್ರಕಾಶ್‍ಶೆಟ್ಟಿ, ಗ್ರಾ.ಪಂ ಸದಸ್ಯರಾದ ಸ್ವಾಮಿ,ಮುಖ್ಯೋಪಾದ್ಯಾಯರು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೇಲೂರು ತಾಲೂಕಿನ ಯೋಜನಾಧಿಕಾರಿ ಸಂಧ್ಯಾ ವಿ.ಶೆಟ್ಟಿ, ವಲಯ ಮೇಲ್ವಿಚಾರಕಿಕೆ.ಭಾರತಿ, ಕೃಷಿ ಮೇಲ್ವಿಚಾರಕ ಚೇತನ್ ಹಾಗೂ ಸೇವಾ ಪ್ರತಿನಿಧಿ ಅಂಬುಜ ಮತ್ತು ಕೃಷ್ಣಮೂರ್ತಿ ಇದ್ದರು. ಶಾಲಾ ಆವರಣದಲ್ಲಿ 30 ಗಿಡಗಳನ್ನು ನಾಟಿ ಮಾಡಲಾಯಿತು. ನಂತರ ನಡೆದ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘದ ಕಾರ್ಯಕ್ರಮದಲ್ಲಿ 30 ಮಂದಿ ಭಾಗವಹಿಸಿದ್ದರು.