ರೈತರ ಮನೆ ಬಾಗಿಲಲ್ಲಿ ಕೃಷಿ-ತೋಟಗಾರಿಕೆ ಸೌಲಭ್ಯ ಬೇಸಾಯ ಪದ್ಧತಿ ಅರಿವು

 ಬೇಲೂರು : ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯ ಹಾಗೂ ಬೇಸಾಯ ಪದ್ಧತಿ ಕುರಿತು ಕೃಷಿ ಅಧಿಕಾರಿ ಅರೇಹಳ್ಳಿಯಲ್ಲಿ ಅರಿವು ಕಾರ್ಯಕ್ರಮ ನಡೆಸಿದರು.

ಬೇಲೂರು ತಾಲ್ಲೂಕು ಅರೇಹಳ್ಳಿ ಗ್ರಾ.ಪಂ.ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯ ಸೌಲಭ್ಯ ಕುರಿತು ಅರಿವು ಮಂಡಿಸಲಾಯಿತು


ಈ ಸಂದರ್ಭ ಮಾತನಾಡಿದ ಕೃಷಿ ಅಧಿಕಾರಿ ಪ್ರಕಾಶಕುಮಾರ್, ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯ ಹಾಗೂ ಬೇಸಾಯ ಪದ್ಧತಿ ಕುರಿತು ಮಾಹಿತಿ ನೀಡಲು `ಇಲಾಖೆಗಳ ನಡೆ ರೈತರ ಮನೆಗಳ ಕಡೆ' ಎಂಬ ಕಾರ್ಯಕ್ರಮವನ್ನು ಜಂಟಿಯಾಗಿ ಹಮ್ಮಿಕೊಂಡಿದೆ. ಈ ವಿಶೇಷ ಕಾರ್ಯಕ್ರಮದ ಮೂಲಕ ಅರೇಹಳ್ಳಿ ಹೋಬಳಿಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದೇವೆ.

ರೈತರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಎಲ್ಲಾ ರೀತಿಯ ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾಬಿ, ಉಪಾಧ್ಯಕ್ಷೆ ಮುನಿರಾ, ರೈತ ಮುಖಂಡ ಖಲೀಲ್ಅಹಮದ್, ಗ್ರಾ.ಪಂ. ಸದಸ್ಯರಾದ ಶಶಿಕುಮಾರ್,ಅಣ್ಣಪ್ಪ, ಚಂದ್ರಶೇಖರ್, ತೋಟಗಾರಿಕೆ ಅಧಿಕಾರಿ ಎಂ.ಅನಿಲ್‍ಕುಮಾರ್,ಪಿಡಿಒ ಸಂತೋಷ್ ಇತರರು ಹಾಜರಿದ್ದರು.

Post a Comment

Previous Post Next Post