ಬಿಜೆಪಿ ರೈತಮೋರ್ಚ ರಾಜ್ಯ ಕಾರ್ಯದರ್ಶಿ ರೇಣುಕುಮಾರ್ ಅಭಿಮತ ಡಿಕೆ.ಶಿವಕುಮಾರ್, ಸಿದ್ದರಾಮಯ್ಯ ರಾಜ್ಯದಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲ

 ಬೇಲೂರು : ಮುಂದೆಯೂ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಈ ರಾಜ್ಯದಲ್ಲಿ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ರೈತಮೋರ್ಚ ಕಾರ್ಯದರ್ಶಿ ಬೆಣ್ಣೂರುರೇಣುಕುಮಾರ್ ಹೇಳಿದರು. 



ಬಸವರಾಜಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಕ್ಕೆ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಮಾತನಾಡಿದ ಅವರು,  ಬಿಜೆಪಿ ರಾಜ್ಯ ಹಾಗೂ ಕೇಂದ್ರದ ನಾಯಕರು ಬಸವರಾಜಬೊಮ್ಮಾಯಿ ಅವರಂತ ಗೌರವಾನ್ವಿತ ಮುಖ್ಯಮಂತ್ರಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿದಾಕ್ಷಣ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಿದ್ದಾರೆ. ರಾಜ್ಯ ಅಭಿವೃದ್ಧಿ ಕಾಣಲಿದೆ. ಮುಂದೆಯೂ ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿಯೆ ಇರುತ್ತಾರೆ. 

ಕೋವಿಡ್ ಸಂದರ್ಭ ಪ್ರಧಾನಿ ನರೇಂದ್ರಮೋದಿ ಅವರು ಪ್ರಪಂಚದ ಮೂರನೇ ಸ್ಥಾನದಲ್ಲಿ ಇರುವ ಭಾರತವಿದ್ದು ಕಾಂಗ್ರೆಸ್ಸಿನ ನಾಯಕರಾದ ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋವಿಡ್ ಲಸಿಕೆ ತೆಗೆದುಕೊಳ್ಳಬೇಡಿ, ಅದು ಬಿಜೆಪಿ ಇಂಜಕ್ಷನ್ ಎಂದು ಅಪಪ್ರಚಾರ ಮಾಡಿ ಪಿತೂರಿ ನಡೆಸಿದರು. ಆದರೆ ನಂತರದ ದಿನದಲ್ಲಿ ಸಿದ್ದರಾಮಯ್ಯ ಅವರು ಲಸಿಕೆ ಪಡೆದುಕೊಂಡರು. ಈಗ ಬಿಜೆಪಿ ಇಂಜಕ್ಷನ್ ಆಗಲಿಲ್ಲವೆ ಎಂದು ಪ್ರಶ್ನಿಸಿದರು.

Advertisement

ಬಿಜೆಪಿ ತಾ.ಅಧ್ಯಕ್ಷ ಅಡಗೂರುಆನಂದ್ ಮಾತನಾಡಿ, ಬಿನ್ನಾಭಿಪ್ರಾಯವಿಲ್ಲದೆ ಬಸವರಾಜಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನಾಗಿ ಮಾಡಿದ್ದಾರೆಂದರು. ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ.ದಯಾನಂದ್ ಮಾತನಾಡಿದರು. ಸಿಹಿ ಹಂಚಲಾಯಿತು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ದಿಲೀಪ್, ಪುರಸಭ ಸದಸ್ಯ ಪ್ರಭಾಕರ್, ಬಿಜೆಪಿ ಮುಖಂಡ ಪೈಂಟ್‌ರವಿ, ಡಾ.ಚೇತನ್, ಜಯಣ್ಣ, ನಾಗೇನಹಳ್ಳಿ ಪಿಡಿಎಲ್‌ಡಿ ಬ್ಯಾಂಕ್ ನಿರ್ದೇಶಕರು, ಯೋಗೇಶಗೌಡ, ಜಯಲಿಂಗಪ್ಪ, ಕೆಡಿಪಿ ಸದಸ್ಯ ನಾಗಚಂದ್ರಜೈನ್, ದೇಗುಲ ಸಮಿತಿ ಮಾಜಿ ಸದಸ್ಯ ವೆಂಕಟೇಗೌಡ, ಜಗದೀಶ್ ಇತರರು ಇದ್ದರು.

Advertisement



Post a Comment

Previous Post Next Post