ಬೇಲೂರು : ಜಿಲ್ಲೆಯ ಮಳೆ ಆಶ್ರಿತ ಪ್ರದೇಶದಲ್ಲಿ ರೈತರು ಬೆಳೆಯುವ ಕಾಫಿ ಅಡಿಕೆ ಕಾಳುಮೆಣಸು ಹಾಗೂ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಎಲ್ಲಾ ರೈತರನ್ನು ಒಂದುಗೂಡಿಸಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತ ಉತ್ಪಾದಕರ ಗುಂಪು ಗಳನ್ನು ರಚನೆ ಮಾಡಲಾಗುವುದು ಎಂದು ಸಹಾಯಕ ತೋಟಗಾರಿಕೆ ಇಲಾಖೆಯ ಅಧಿಕಾರಿ ಯತೀಶ್ ತಿಳಿಸಿದರು
![]() |
ಬೇಲೂರು ತಾಲ್ಲೂಕು ಅರೇಹಳ್ಳಿಯಲ್ಲಿ ಕಾಫಿ ಬೆಳೆಗಾರರ ಸಂಘ ಹಾಗೂ ಪ್ರಗತಿಪರ ರೈತರ ಸಭೆಯನ್ನು ಪ್ರಮುಖರು ಉದ್ಘಾಟಿಸಿದರು |
ಬೇಲೂರು ತಾಲೂಕು ಅರೆಹಳ್ಳಿಯ ಕಾಫಿ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಅರೇಹಳ್ಳಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಕಾಫಿ ಬೆಳೆಗಾರರ ಸಂಘ ಹಾಗೂ ಪ್ರಗತಿಪರ ರೈತರ ಸಭೆಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದ ರೈತರ ಅಭಿವೃದ್ಧಿಗಾಗಿ ಗುಂಪು ಸಂಘಗಳನ್ನು ರಚನೆ ಮಾಡುತ್ತಿದ್ದು ಮೀಸಲಾತಿ ಅನುಗುಣವಾಗಿ ಪ್ರತಿ ಪಂಚಾಯಿತಿ ಮಟ್ಟದಲ್ಲಿ ೩೦ ಜನರನ್ನು ಗುಂಪುಗಳಾಗಿ ಪರಿವರ್ತನೆ ಮಾಡಿ ಸಹಾಯಧನ ನೀಡಲಾಗುವುದು.
ಪ್ರಕೃತಿ ವಿಕೋಪ ಹಾಗೂ ಹವಾಮಾನ ವೈಫಲ್ಯದಿಂದ ರೈತರು ನಷ್ಟ ಅನುಭವಿಸುತ್ತಿದ್ದು ತಮ್ಮ ಬೆಳಗೆ ವಿಮೆ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ೨೦೧೮-೧೯ ರಲ್ಲಿ ರೈತರು ಪಾವತಿಸಿದ ೩೦ ಲಕ್ಷ ವಿಮೆ ಹಣಕ್ಕೆ ೧೫೪೯ ರೈತರಿಗೆ ೨.೭೨ ಕೋಟಿ ರೂ ಬೆಳೆ ಪರಿಹಾರ ನೀಡಲಾಗಿದೆ. ೨೦೧೯-೨೦ ರಲ್ಲಿ ೧೪ ಲಕ್ಷ ವಿಮೆ ಹಣಕ್ಕೆ ೯೭೨ ರೈತರು ಬೆಳೆ ವಿಮೆಯ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.
ಕಾಫಿ ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ತೋಚ ಅನಂತ ಸುಬ್ಬ ರಾಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಫಿ ಬೆಳೆ ಗಾರರ ಅನುಕೂಲಕ್ಕಾಗಿ ಕಾಳುಮೆಣಸು ಬೆಳಗೆ ಫಸಲ್ ಭೀಮಾ ಯೋಜನೆಯಡಿ ಹಣ ಬಿಡುಗಡೆ ಮಾಡಿದ್ದು ಸಕಲೇಶಪುರ ಆರು ಕೋಟಿ ಆಲೂರು ಒಂದು ಕೋಟಿ ಬೇಲೂರಿಗೆ ೧.೧೦ ಕೋಟಿ ಹಣ ಬಿಡುಗಡೆಯಾಗಿದೆ. ರೈತರು ಯಾವುದೇ ವಾಣಿಜ್ಯ ಬೆಳೆ ಇರಲಿ ಕಡ್ಡಾಯವಾಗಿ ವಿಮೆ ಮಾಡಿದಲ್ಲಿ ಮುಂದಾಗುವ ಸಮಸ್ಯೆಗಳಿಂದ ಪಾರಾಗಬಹುದು ಎಂದು ಸಲಹೆ ನೀಡಿದರು.
![]() |
Advertisement |
ಕಾರ್ಯಕ್ರಮದಲ್ಲಿ ಕಾಫಿ ಬೆಳಗಾರ ಸಂಘದ ಅಧ್ಯಕ್ಷ ಮಂಜುನಾಥ್‌ಶೆಟ್ಟಿ, ಎಚ್‌ಎಸ್.ಗೋವಿಂದ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯೆ ಲತಾಮಂಜೇಶ್ವರಿ ಕಾಫಿ ಬೆಳೆಗಾರರಾದ ನಟರಾಜು, ತಮ್ಮಣ್ಣಗೌಡ, ಚೇತನ್‌ಕುಮಾರ್, ಸೋಮಯ್ಯ, ಶಶಿಕುಮಾರ್, ಕಮಲಾಚನ್ನಪ್ಪ, ರಾಜೇಗೌಡ, ಕೃಷಿ ಅಧಿಕಾರಿ ಶಶಿಧರ್, ಪ್ರಕಾಶ್ ಕುಮಾರ್ ಇತರರು ಹಾಜರಿದ್ದರು.
![]() |
Advertisement |