ಬೇಲೂರು: ಶೆಟ್ಟಿಗೆರೆ ಗ್ರಾಮದ ದಲಿತರ ಜಮೀನನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದನ್ನು ಕಂಡು ಸ್ಥಳಕ್ಕೆ ಸಕಲೇಶಪುರ ಉಪವಿಭಾಗದಿಕಾರಿ ಪ್ರತೀಕ್ ಬಯಾಲ್ ಹಾಗೂ ತಹಶಿಲ್ದಾರ್ ಮೋಹನ್ ಕುಮಾರ್ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಕಸಬಾ ಹೋಬಳಿ ಶೆಟ್ಟಿಗೆರೆ ಗ್ರಾಮದಲ್ಲಿ ಸರ್ವೆ ನಂಬರ್ ೭೧ ರಲ್ಲಿ ಮುಳುಗಡೆ ಸಂತ್ರಸ್ತರಿಗೆ ೮ ಎಕರೆ ಜಮೀನನ್ನು ಸುಮಾರು ೧೩ ಕುಟುಂಬಗಳಿಗೆ ಮಂಜೂರು ಮಾಡಲಾಗಿತ್ತು.ಆದರೆ ಕೆಲವರು ಸುಳ್ಳು ದಾಖಲೆ ಸೃಷ್ಟಿಸಿ ಈ ಜಾಗವನ್ನು ಕಬಳಿಸಲು ಹುನ್ನಾರ ನಡೆಸಿದ್ದರು.
ಆ ಜಾಗವನ್ನುತೆರವು ಮಾಡುವ ಸಂದರ್ಭದಲ್ಲಿ ಏನಾದರೂ ಅಹಿತ ಘಟನೆ ನಡೆದರೆ ಗ್ರಾಮಸ್ಥರನ್ನೇ ಹೊಣೆ ಮಾಡುತ್ತೇವೆ ಎಂದು ಕಂದಾಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಇಂದ ನೋಟೀಸ್ ಜಾರಿ ಮಾಡಿದ್ದನ್ನು ಮನಗಂಡು ನಮ್ಮನ್ನು ಹಾಗೂ ನಮ್ಮ ಭೂಮಿಯನ್ನು ಕಿತ್ತುಕೊಂಡಿದಲ್ಲಿ ವಿಷಕುಡಿದು ಸಾಯುತ್ತೇವೆ ಎಂದು ಪ್ರತಿಭಟಿಸಿದ್ದರು.
ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ ಅಧಿಕಾರಿಗಳು
ಗ್ರಾಮಸ್ಥರ ಮನವಿ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ರೈತರು ತಮಗೆ ೭೧ ಹಾಗೂ ೭೨ ನೇ ಸಾಲಿನಲ್ಲಿ ನಮಗೆ ೧೩ ಜನರಿಗೆ ಭೂಮಿ ಮಂಜೂರಾಗಿತ್ತು.ಕೆಲವು ಭೂಗಳ್ಳರ ಜೊತೆ ಕಂದಾಯ ಇಲಾಖೆಯ ಸರ್ವೆಯರ್ ಸೇರಿಕೊಂಡು ನಮಗೆ ಅನ್ಯಾಯ ಮಾಡಿದ್ದಾರೆ.ಅಲ್ಲದೆ ನಮಗೆ ಈಗಾಗಲೇ ಐದು ವರ್ಷದಿಂದ ಪೋಡಿ ಮಾಡಿಕೊಡುವಂತೆ ಮನವಿ ಮಾಡಿದರೂ ಸಹ ಇಲ್ಲಿವರೆಗೆ ಯಾವ ಅಧಿಕಾರಿಗಳು ಗಮನ ಹರಿಸಿಲ್ಲ ದಯಮಾಡಿ ನಮಗೆ ಈ ಸಮಸ್ಯೆ ಬಗೆಹರಿಸು ಕೊಡಬೇಕು ಇಲ್ಲದಿದ್ದರೆ ನಾವು ವಿಷಕುಡಿಯುತ್ತೇವೆ ಎಂದಾಗ ಉಪವಿಭಾಗ ಅಧಿಕಾರಿಗಳು ರೈತರ ಬಳಿ ಕೈಮುಗಿದು ನಿಮ್ಮ ಜೊತೆ ನಾವಿದ್ದೇವೆ ಯಾರೂ ಕೂಡ ದುಡುಕಬೇಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಕಲೇಶಪುರ ಉಪವಿಭಾಗಧಿಕಾರಿ ಪ್ರತೀಕ್ ಬಯಾಲ್
ಈಗಾಗಲೇ ರೈತರ ಬಳಿ ಇರುವ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ. ೭೧-೭೨ ನೇ ಸಾಲಿನಲ್ಲಿ ಭೂಮಿ ಮಂಜೂರಾಗಿದ್ಸು ಇದು ಬೇರೆಯವರಿಗೆ ಹೇಗೆ ಮಂಜೂರಾಗಿದೆ ಎಂಬುವುದರ ಬಗ್ಗೆ ಪರಿಶೀಲಿಸಲಾಗುವುದು. ಇದರ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ತಹಶಿಲ್ದಾರ್ ಮೋಹನ್ ಕುಮಾರ್ ಮಾತನಾಡಿ ನ್ಯಾಯಾಲಯದಿಂದ ಈ ಜಾಗದ ರೈತರು ತಡೆಯಾಜ್ಞೆ ತಂದಿದ್ಸು ಯಾವುದೇ ರೀತಿಯಲ್ಲಿ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ.ಸ್ಥಳಕ್ಕೆ ಎಸಿಯವರು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ.ಇವರ ಬಳಿ ಸಾಗುವಳಿ ಚೀಟಿಗಳಿದ್ದು ಅದರ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ ದಾಖಲೆ ಸಮೇತ ಮಾಹಿತಿ ನೀಡಲಾಗುವುದು.ಇದರ ಬಗ್ಗೆ ಮಾಹಿತಿಯನ್ನು ದಾಖಲೆ ಸಮೇತ ಕಲೆ ಹಾಕಿ ರೈತರಿಗೆ ನ್ಯಾಯ ಒದಗಿಸಲಾಗುವುದು ಯಾರೂ ಸಹ ಭಯಪಡುವಂತ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ವೆ ಸೂಪರ್ ಡೆಂಟ್ ಮಲ್ಲಿಕಾರ್ಜುನ , ತಾಲೂಕು ಸರ್ವೆಯರ್ ಕುಮಾರ್
ಶಿರಸ್ಥೇದಾರ್ ತನ್ವೀರ್ ಅಹಮದ್, ಎಡಿಎಲ್ ಆರ್ ಮಂಜುನಾಥ್, ಅಸ್ಲಂ ,ಆರ್ ಐ ಪ್ರಕಾಶ್,ಗ್ರಾಮಸ್ಥರಾದ ಬಸವರಾಜು,ಸ್ವಾಮಿ ,ರುದ್ರಯ್ಯ,ರಘು,ದರ್ಮೇಶ್,ಶಿವಣ್ಣ ಜಯಮ್ಮ,ತಿಮ್ಮಮ್ಮ,ಶಿವಮ್ಮ,ಮಂಜುಳಮ್ಮ ಹಾಜರಿದ್ದರು.
Tags
ಬೇಲೂರು
