ಬೇಲೂರು :ತಾಲೂಕಿನಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಶಾಸಕ ಕೆಎಸ್.ಲಿಂಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
![]() |
ಬೇಲೂರು ಶಾಸಕ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದರು ಹಾನಿಯಾಗಿರುವ ರಸ್ತೆ ತಾತ್ಕಾಲಿಕ ಕೆಲಸ ನಡೆಯುತ್ತಿರುವುದು |
ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸುರಿದ ಬಾರಿ ಮಳೆಯಿಂದಾಗಿ ಕೆಲವು ಭಾಗಗಳಿಗೆ ಸೇತುವೆ, ರಸ್ತೆ, ಜಮೀನಿಗೆ ನೀರು ನುಗ್ಗಿ ಹಾನಿಯಾಗಿರುವುದನ್ನು ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಬಕ್ರವಳ್ಳಿ, ಮುರೇಹಳ್ಳಿ, ನಳಿಕೆ, ಮಲಸಾವರ, ತುಂಬದೇವನಹಳ್ಳಿ, ನಾರ್ವೆಪೇಟೆ ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಿಸಿದ್ದೇನೆ. ಬಕ್ರವಳ್ಳಿ ಗ್ರಾಮದ ಸೇತುವೆ ಸಂಪೂರ್ಣ ಕುಸಿದು ಬಿದ್ದಿದೆ. ಸೊಂಪುರ ಗ್ರಾಮದ ಸೇತುವೆ ತಳಭಾಗ ಕುಸಿದಿದ್ದು ತಾತ್ಕಾಲಿಕ ವಾಗಿ ಅವುಗಳನ್ನು ದುರಸ್ಥಿ ಮಾಡಿಸಲಾಗುವುದು. ಬಕ್ರವಳ್ಳಿ ಗ್ರಾಮದ ಸೇತುವೆ ಸಂಪೂರ್ಣ ಕುಸಿದಿದ್ದು ಬದಲಿಯಾಗಿ ಶಾಶ್ವತ ಸೇತುವೆಯನ್ನು ೩೦ ಲಕ್ಷರೂ. ವೆಚ್ಚದಲ್ಲಿ ಲ್ಯಾಂಡ್ ಆರ್ಮಿ ವಿಭಾಗದಿಂದ ನಿರ್ಮಿಸಲಾಗುವುದು. ಗ್ರಾಮಸ್ಥರು ಓಡಾಡಲು ತಾತ್ಕಾಲಿಕ ರಸ್ತೆ ನಿರ್ಮಿಸಲಾಗುತ್ತಿದೆ. ಸೇತುವೆಗಳಿಗೆ ಡಕ್ ಮೂಲಕ ನೀರು ಹರಿಸಲಾಗುವುದು. ನಾರ್ವೆಯ ಅಬ್ಬಿಕಟ್ಟೆ ಸಂಪೂರ್ಣ ಭರ್ತಿಯಾದ ಹಿನ್ನಲೆಯಲ್ಲಿ ನೀರು ಪ್ರವಾಹದಂತೆ ನುಗ್ಗಿ ಅಕ್ಕಪಕ್ಕದ ಜಮೀನುಗಳು ಸಂಪೂರ್ಣ ಹಾಳಾಗಿರುವುದರಿಂದ ಅದರ ಮಾಹಿತಿ ಪಡೆದು ಪರಿಹಾರ ನೀಡಲು ಸೂಚಿಸಲಾಗಿದೆ. ಶಿರಗುರ ರಸ್ತೆಯು ಹಾಳಾಗಿರುವುದರಿಂದ ದುರಸ್ತಿಗೆ ೧೦ ಲಕ್ಷ ಅನುದಾನ ನೀಡಲಾಗಿದೆ ಎಂದರು.
![]() |
Advertisement |
ಜೆಡಿಎಸ್ ಮುಖಂಡರಾದ ಸವೀನ್, ನಟರಾಜ್, ಎಪಿಎಮ್‌ಸಿ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ತಾ.ಪಂ.ಮಾಜಿ ಸದಸ್ಯ ಸೋಮಯ್ಯ, ಪ್ರಮುಖರಾದ ಮುರುಳಿ, ತಾಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಉಮೇಶ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ನಾಗೇಶ್ ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
![]() |
Advertisement |