ಬೇಲೂರು: ಯಗಚಿ ಅಣೆಕಟ್ಟೆ ಬಳಿ ೧ ಕೋಟಿ ರೂ. ವೆಚ್ಚದಲ್ಲಿ ಸಣ್ಣ ಪ್ರಮಾಣದ ಉದ್ಯಾನವನ ನಿರ್ಮಿಸಲಾಗುವುದು ಎಂದು ಶಾಸಕ ಕೆಎಸ್.ಲಿಂಗೇಶ್ ಹೇಳಿದರು.
![]() |
ಬೇಲೂರಿನ ಯಗಚಿ ಜಲಾಶಯದಿಂದ ನಾಲೆ ಮೂಲಕ ನೀರು ಬಿಡುವ ಮುಂಚೆ ಯಂತ್ರಕ್ಕೆ ಶಾಸಕ ಲಿಂಗೇಶ್ ಪೂಜೆ ಸಲ್ಲಿಸಿದರು |
ಹಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಂತ ಅವಧಿಯಲ್ಲಿ ಯಗಚಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ೨೪ ಕೋಟಿ ರೂಗಳನ್ನು ಮೀಸಲಿಟ್ಟಿದ್ದರು. ಆದರೆ ಇತ್ತೀಚಿನ ರಾಜಕೀಯ ವಿದ್ಯಾಮಾನಗಳಿಂದ ಕೊರೋನಾದ ನೆಪದಲ್ಲಿ ಅನುದಾನ ಹಿಂಪಡೆದುಕೊಂಡಿದ್ದರಿಂದ ಉದ್ಯಾನವನ ಕೆಲಸ ಆರಂಭವಾಗಲಿಲ್ಲ. ಇದೀಗ ಸಣ್ಣ ಪ್ರಮಾಣದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗುವುದು ಎಂದರು.
ಬೇಲೂರಿನ ಯಗಚಿ ಜಲಾಶಯದಿಂದ ನಾಲೆಗೆ ನೀರು ಬಿಡುವ ಮುಂಚೆ ಯಂತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾನು ಶಾಸಕನಾದ ನಂತರ ೪ ಬಾರಿ ಜಲಾಶಯ ಭರ್ತಿಯಾಗಿದೆ. ಇದು ಶುಭಸೂಚನೆ ಎಂದು ಭಾವಿಸಿದ್ದೇನೆ. ಇದಕ್ಕಾಗಿ ಬಾಗಿನ ಬಿಡುವ ಉದ್ದೇಶವಿತ್ತಾದರೂ ಉಸ್ತುವಾರಿ ಸಚಿವರು ಹಾಗೂ ಸಂಸದರ ಕೆಲಸ ಒತ್ತಡದಿಂದಾಗಿ ಕಾರ್ಯಕ್ರಮ ಮುಂದೂಡಲ್ಪಟ್ಟಿದ್ದು ಇದೀಗ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
![]() |
Advertisement |
ನಾಲೆ ಮೂಲಕ ೧೦,೫೦೦ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ. ಪ್ರತಿಯೊಬ್ಬ ರೈತರಿಗೂ ಇದು ಅನುಕೂಲವಾಗಲಿದೆ. ನಮ್ಮ ತಾಲೂಕಿನ ಹಳೇಬೀಡು ,ಮಾದೀಹಳ್ಳಿ ಹೋಬಳಿಯ ಭಾಗದ ರೈತರಿಗೆ ಏತ ನೀರಾವರಿ ಮೂಲಕ ನೀರು ಹರಿಸಲಾಗುತ್ತಿದೆ. ಜಲಾಶಯದಿಂದ ಚಿಕ್ಕಮಗಳೂರು, ಅರಸೀಕೆರೆ, ಹಳೇಬೀಡು ಭಾಗಕ್ಕೆ ಕುಡಿಯುವ ನೀರನ್ನು ನೀಡಲಾಗುತ್ತಿದೆ ಎಂದರು.
ಎಇಇ ರಾಜೇಶ್ ಮಾತನಾಡಿ, ಈಗಾಗಲೇ ಸುಮಾರು ೧೫ ದಿನಗಳಿಂದ ಈ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಕ್ಕೆ ೧.೫೩ ಟಿಎಂಸಿ ನೀರು ಹರಿದುಬರುತ್ತಿದ್ದು. ೧ ಟಿಎಂಸಿ ನೀರನ್ನು ಈಗಾಗಲೇ ೫ ಕ್ರಸ್ ಗೇಟ್ ಮೂಲಕ ನದಿಗಳಿಗೆ ಹರಿಸಲಾಗುತ್ತಿದೆ. ೨೦೦ ಕ್ಯೂಸೆಕ್ಸ್ ನೀರನ್ನು ಇಂದಿನಿಂದ ನಾಲೆ ಮೂಲಕ ಬೇಲೂರು, ಆಲೂರು, ಹಾಸನ, ಹೊಳೆನರಸೀಪುರ ಸೇರಿದಂತೆ ಈ ಭಾಗದಲ್ಲಿ ಬರುವ ಸುಮಾರು ೧೦೦ ಕಿಮೀ ಸುತ್ತ ರೈತರಿಗೆ ನೀರು ಕೊಡಲಾಗುತ್ತಿದೆ ಎಂದು ತಿಳಿಸಿದರು.ಯಗಚಿ ಕಾರ್ಯಪಾಲಕ ಇಂಜಿನಿಯರ್ ಕಾರ್ಯಪಾಲಕ ಇಂಜಿನಿಯರ್ ತಿಮ್ಮೇಗೌಡ, ಎಇ ಶಿವಕುಮಾರ್ ಇನ್ನಿತರ ಪ್ರಮುಖರು ಇದ್ದರು
![]() |
Advertisement |