ಬೇಲೂರು ಕ್ಷೇತ್ರದ ಜಾವಗಲ್ ಗ್ರಾಮದ ಗಾಂಧಿನಗರ ಬಡಾವಣೆಯಲ್ಲಿ ಅರುಂಧತಿ ಮತ್ತು ಅನ್ನಪೂರ್ಣೇಶ್ವರಿ ಸ್ವ ಸಹಾಯ ಸಂಘಗಳಿಂದ 75 ನೇ ವರ್ಷದ ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಿದರು,
ಈ ಸಂದರ್ಭದಲ್ಲಿ ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಇಂದ್ರೇಶ್ ಮಾತನಾಡಿ 1947 ಕ್ಕೆ ಮುಂಚೆ ನಾವುಗಳು ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದ ದೇಶಕ್ಕೆ ಮಹಾತ್ಮ ಗಾಂಧಿಜೀ ಹಾಗೂ ಅನೇಕ ಮಹನೀಯರ ಅಹಿಂಸ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿತು ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ನಮಗೆ ಆಗಸ್ಟ್ 15, 1947 ರಲ್ಲಿ ನಮಗೆ ಸ್ವಾತಂತ್ರ್ಯ ದೊರಕಿತು ಇಂದಿಗೆ 75 ನೇ ವರ್ಷದ ಅಮೃತ ಮಹೋತ್ಸವದ ಆಚರಣೆ ಅತ್ಯಂತ ಸಂತೋಷ ತಂದಿದೆ ಎಂದರು,
ಈ ಸಂದರ್ಭದಲ್ಲಿ ಪಿ ಡಿ ಓ ರವಿ,ಲಿಂಗರಾಜು, ವಿ ಟಿ ಎಸ್ ನಾಗರಾಜು ಮಾಜಿ ಗ್ರಾ ಪಂ ಅಧ್ಯಕ್ಷೆ ವನಜಾ ಇಂದ್ರೇಶ್, ಸಂಘದ ಸದಸ್ಯರುಗಳಾದ ರಂಗಮ್ಮ, ರತ್ನಮ್ಮ, ಮಮತ ತಿಮ್ಮಮ್ಮ, ,ಲೋಲಾಕ್ಷಮ್ಮ ಮಂಜುಳಾ,ರೇಖಾ, ಜಯಮ್ಮ ಹಾಗೂ ಅಣ್ಣಯ್ಯ ಉಪಸ್ಥಿತರಿದ್ದರು.
