ದೇಶದೊಳಗೆ ವೈಷಮ್ಯ, ತಾರತಮ್ಯ, ಒಳಜಗಳಕ್ಕೆ ಅವಕಾಶ ಬೇಡ :ಬೇಲೂರಿನಲ್ಲಿ ಶಾಸಕ ಕೆಎಸ್.ಲಿಂಗೇಶ್ ಅಭಿಮತ

 ಬೇಲೂರು:ದೇಶದೊಳಗಿನ ವೈಷಮ್ಯ, ತಾರತಮ್ಯ, ಒಳಜಗಳದಿಂದಾಗಿ ದೇಶವು ೩೫೦ ವರ್ಷಗಳ ಕಾಲ ಪರಕೀಯರ ಆಡಳಿತಕ್ಕೆ ಒಳಗಾಗಿದ್ದಂತ ರೀತಿಯಲ್ಲಿ ಪುನರಾವರ್ತನೆ ಅವಕಾಶ ಕೊಡಬಾರದು ಎಂದು ಶಾಸಕ ಕೆಎಸ್.ಲಿಂಗೇಶ್ ಹೇಳಿದರು.

ತಾಲ್ಲೂಕು ಆಡಳಿತದಿಂದ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗದ ಮೈದಾನದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಮಕ್ಕಳಿಗೆ ಮಹಾತ್ಮಗಾಂಧಿ, ನೆಹರೂ ಬಿಟ್ಟರೆ  ನೂರಾರು ಸ್ವಾತಂತ್ರ್ಯ  ಹೋರಾಟಗಾರರ ಪರಿಚಯ ಇಲ್ಲವಾಗಿದೆ. ಉಳಿದ ಸೇನಾನಿಗಳ ಇತಿಹಾಸ ತಿಳಿಸುವ ಕೆಲಸ ಆಗಬೇಕಿದೆ.


ದೇಶದ ಅಭಿವೃದ್ಧಿಗೆ ಪೂರಕವಾದ ಸಂವಿಧಾನವಿಂದು ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ರಚನೆಗೊಂಡಿದ್ದರ ಪರಿಣಾಮ ಹೆಚ್.ಡಿ.ದೇವೇಗೌಡರು, ನರೇಂದ್ರಮೋದಿಯವರು ಈ ದೇಶದ ಪ್ರಧಾನಿ ಆಗಿದ್ದಾರೆಂದು ವ್ಯಾಖ್ಯಾನಿಸಿದರು. ಇಂದು ಕೆಲವರು ಧರ್ಮ, ಜಾತಿ ಹೆಸರಲ್ಲಿ ದೇಶ ಒಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದರು. ರೈತವಿರೋಧಿ ಆಡಳಿತ ನಡೆಯುತ್ತಿದೆ. ಮೂಲಭೂತ ಸೌಕರ್ಯಗಳ ಬಗೆಹರಿಸುವಲ್ಲಿ ವಿಫಲವಾಗುತ್ತಿದೆ. ದೇಶದೊಳಗೆ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದರ ನಡುವೆಯೂ ಕೊರೊನಾ ಮಹಾಮಾರಿಯನ್ನು ಹತೋಟಿಗೆ ತರುವಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಆಡಳಿತ ಸಫಲವಾಗಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆಯಡಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡಿಸುವುದರ ಜೊತೆಗೆ ತಾಲ್ಲೂಕಿಗೆ ಎತ್ತಿನಹೊಳೆ ನೀರು ದಕ್ಕುವಂತೆ ಮಾಡಲಾಗುವುದು. ಆನೆಗಳ ಕಾಟ ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ. ತಾಲ್ಲೂಕಿನ ಕೆಲವು ಪ್ರದೇಶವನ್ನಾದರೂ ಬರಗಾಲ ಪೀಡಿತ ಎಂದು ಘೋಷಣೆ ಮಾಡುವ ಅಗತ್ಯವಿದೆ, ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸಬೇಕಿದೆ. ಇವುಗಳ ಬಗ್ಗೆ ಗಮನ ಹರಿಸದಿದ್ದರೆ ವಿಧಾನಸೌಧದ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಹಸೀಲ್ದಾರ್ ಯು.ಎಂ.ಮೋಹನಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಹಿಂಸೆ ಮಾರ್ಗದಲ್ಲಿ ನಾವು ಪಡೆದ ಸ್ವಾತಂತ್ರ್ಯ ವಿಶ್ವಕ್ಕೆ ಮಾದರಿಯಾಗಿದೆ. ಅನೇಕ ವಿಧದ ನೋವು, ಹಿಂಸೆಗಳ ಅನುಭವಿಸಿ, ಲಕ್ಷಾಂತರ ಜನರ ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯದ ಅರಿವು ನಮಗಿಲ್ಲವಾಗಿದೆ. ಹಕ್ಕುಗಳಿಗೆ ಒತ್ತಾಯಿಸುವ ನಾವು ಕರ್ತವ್ಯದ ಬಗ್ಗೆ ಆಲೋಚಿಸುವುದಿಲ್ಲ. ಜನಸಂಖ್ಯೆ ಬೆಳೆದಂತೆಲ್ಲಾ ಸಮಸ್ಯೆ ಉಲ್ಭಣಗೊಳ್ಳುವುದಿದ್ದರೂ ಪರಿಹಾರದತ್ತಲೂ ಗಮನ ಹರಿಸಬೇಕೆಂದರು.

ಕೊರೊನಾ ವಾರಿರ‍್ಸ್ಗಳಾಗಿ ದುಡಿದ ಡಾ.ಕೆ.ಎನ್.ಸುರೇಶ್, ಡಾ.ಮಮತ, ಔಷಧ ವಿತರಣೆಗಾರ ನವೀದಪಾಷ, ಹಿ.ಆ.ನಿರೀಕ್ಷಕ ಚಂದ್ರೇಗೌಡ, ಶುಶ್ರೂಷಕಾಧಿಕಾರಿ ಭಾಗ್ಯ, ಡಿ.ದರ್ಜೆ ನೌಕರ ಕೆ.ಇ.ಪ್ರದೀಪ ಹಾಗೂ ಶಾರದಮ್ಮ, ಉಪತಹಸೀಲ್ದಾರ್ ಗಂಗಾಧರ್, ಗ್ರಾ.ಲೆಕ್ಕಿಗ ಎಂ.ಎಸ್.ಪ್ರಭಾ, ಗ್ರಾ.ಸಹಾಯಕ ಸಿದ್ದಯ್ಯ, ಮಾಜಿ ಸೈನಿಕ ಜಿ.ಬಿ.ನಾಯಕ್ ಹಾಗೂ ವೆಂಕಟೇಶಗೌಡ, ಎಎಸ್‌ಐ ಬಿ.ದೇವಯ್ಯ, ಪೊಲೀಸ್ ಕಾನ್ಸ್ಟೇಬಲ್ ಆರೀಫ್‌ಜಿಬಿಲಿ, ಶಿಕ್ಷಕ ಗುರುರಾಜ್, ದೈಹಿಕ ಶಿಕ್ಷಕ ವೆಂಕಟೇಶ್, ಪಿಡಿಒ ರೇವತಿ, ವಾಟರ್‌ಮೆನ್ ಸೋಮಶೇಖರ್, ಪತ್ರಕರ್ತ ಗಣೇಶ್, ದ್ವಿದಸ. ಸರೋಜಮ್ಮ, ಅಂಗನವಾಡಿ ಕಾರ್ಯಕರ್ತೆ ಮಂಜುಳ, ಬೇಲೂರು ಪುರಸಭೆ ದ್ವೀತಿಯ ಅರ್ಜೆ ಸಹಾಯಕಿ  ಸರೋಜಮ್ಮ,

 ಅಡುಗೆ ಸಹಾಯಕಿ ಎನ್.ಆರ್.ಕಮಲ, ಪೌರಕಾರ್ಮಿಕರಾದ ಏಮೇಲಮ್ಮ , ಹಾಗೂ ಮಾಣಿಕ್ಯ ಇವರನ್ನು ಗೌರವಿಸಲಾಯಿತು.


ಎಪಿಎಂಸಿ ಅಧ್ಯಕ್ಷ ಚಿನ್ನೇನಹಳ್ಳಿಮಹೇಶ್, ಹಳೇಬೀಡು ಬೇಲೂರು ಪ್ರಾಧಿಕಾರದ ಅಧ್ಯಕ್ಷ ಎ.ಎಸ್.ಬಸವರಾಜು ಮಾತನಾಡಿದರು. ಪೊಲೀಸ್ ದಳದಿಂದ ಅತಿಥಿ ಗಣ್ಯರು ಧ್ವಜಾವಂದನೆ ಸ್ವೀಕರಿಸಿದರು. ವಿವಿಧ ಶಾಲಾ ಮಕ್ಕಳು ನಾಡಗೀತೆ, ರೈತಗೀತೆ, ರಾಷ್ಟçಗೀತೆ ಹೇಳಿದರು. ತಾ.ಪಂ.ಇಒ ರವಿಕುಮಾರ್, ಪುರಸಭ ಮುಖ್ಯಾಧಿಕಾರಿ ಎಸ್.ಎಂ.ಸುಜಯ್‌ಕುಮಾರ್, ಬಿಇಒ ಲೋಕೇಶ್, ಸಿಪಿಐ ಯೋಗೇಶ್ ಹಾಗೂ ಶ್ರೀಕಾಂತ್, ಪಿಎಸ್‌ಐ ಎಸ್.ಹೆಚ್.ಪಾಟೀಲ್, ಶಕುಂತಾಲಾ, ಉಪತಹಸೀಲ್ದಾರ್ ನಾಗರಾಜ್, ಪುರಸಭ ಸದಸ್ಯ ಜಿ.ಶಾಂತಕುಮಾರ್, ಕರವೇ ಚಂದ್ರಶೇಖರ್ ಇತರರು ಇದ್ದರು. 

ದೈಹಿಕ ಶಿಕ್ಷಣಾಧಿಕಾರಿ ಪಾಲಾಕ್ಷಮೂರ್ತಿ, ದೈಹಿಕ ಶಿಕ್ಷಕರಾದ ನಂದೀಶ್ ಹಾಗೂ ವೆಂಕಟೇಶ್ ನಿರೂಪಿಸಿದರು.


Post a Comment

Previous Post Next Post