ಜಿಲ್ಲೆಯಲ್ಲಿಂದು ಹೊಸದಾಗಿ 90 ಕೋವಿಡ್ ಪ್ರಕರಣಗಳು ಪತ್ತೆ

ಹಾಸನ ಆ.19 ಜಿಲ್ಲೆಯಲ್ಲಿಂದು ಹೊಸದಾಗಿ 90 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 1 ಮಂದಿ ಮೃತ ಪಟ್ಟಿದ್ದಾರೆ. ಕಳೆದ ವರ್ಷದ ಪ್ರಾರಂಭದಿಂದ ಸೇರಿದಂತೆ ಒಟ್ಟಾರೆ ಸೋಂಕಿತರ ಸಂಖ್ಯೆ 108528 ಕ್ಕೆ ಏರಿಕೆಯಾಗಿದೆ.   

2021 ಮಾರ್ಚ್ 22 ರಿಂದ ಇದುವರೆಗೆ ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ 79309 ಆಸ್ಪತ್ರೆಯಿಂದ ಇಂದು 53 ಮಂದಿ ಬಿಡುಗಡೆ ಹೊಂದಿರುವವರು ಸೇರಿದಂತೆ ಒಟ್ಟು 106158  ಮಂದಿ ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 1056 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 47 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ 1314 ಕ್ಕೆ ಏರಿಕೆಯಾಗಿದೆ.   

Advertisement


ಇಂದು ಪತ್ತೆಯಾದ 90 ಕೋವಿಡ್ ಪ್ರಕರಣಗಳಲ್ಲಿ ಆಲೂರು ತಾಲ್ಲೂಕಿನಲ್ಲಿ 07 ಮಂದಿ, ಅರಕಲಗೂಡು  ತಾಲ್ಲೂಕಿನಲ್ಲಿ 05 ಮಂದಿ, ಅರಸೀಕೆರೆ ತಾಲ್ಲೂಕು 09 ಮಂದಿ, ಬೇಲೂರು  ತಾಲ್ಲೂಕಿನಲ್ಲಿ 14 ಮಂದಿ, ಚನ್ನರಾಯಪಟ್ಟಣ  ತಾಲ್ಲೂಕಿನಲ್ಲಿ 12 ಮಂದಿ, ಹಾಸನ ತಾಲ್ಲೂಕಿನಲ್ಲಿ 34 ಮಂದಿ, ಸಕಲೇಶಪುರ ತಾಲ್ಲೂಕಿನಲ್ಲಿ 06 ಮಂದಿ, ಇತರ ಜಿಲ್ಲೆಯ 03 ಮಂದಿಗೆ ಕೋವಿಡ್ ದೃಡಪಟ್ಟಿದ್ದು, ಸಕಲೇಶಪುರ ತಾಲ್ಲೂಕಿನಲ್ಲಿ ಒಬ್ಬರು  ಮೃತ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ.  

***************

Post a Comment

Previous Post Next Post