ಜಾವಗಲ್ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು ಇವುಗಳ ಪ್ರಗತಿಗೆ ಆಧ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ ಎಸ್ ಲಿಂಗೇಶ್ ತಿಳಿಸಿದರು
ಸಮೀಪದ ನೇರ್ಲಿಗೆ ಗ್ರಾಮದಲ್ಲಿ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಕಟ್ಟಡ, ಗೋದಾಮು, ಹಾಗೂ ವಾಣಿಜ್ಯ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿ ಅವರು ಗ್ರಾಮೀಣ ಪ್ರದೇಶದ ಜನತೆ ಕೃಷಿ ಪತ್ತಿನ ಸಹಕಾರ ಸಂಘಗಳು ತುಂಬ ಅನುಕೂಲವಾಗಿವೆ. ಇವುಗಳನ್ನು ಸಾಲ ಪಡೆದುಕೊಂಡು ಕೃಷಿ ಚಟುವಟಿಕೆಗೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಬಸವರಾಜು ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ ಸಹ ರೈತರು ಇದನ್ನೇ ಅವಲಂಭಿಸಿದ್ದಾರೆ. ಸರಕಾರ ಕೂಡ ಅವರಿಗೆ ಶೂನ್ಯ ಬಡ್ಡಿ ದರಲ್ಲಿ ಸಾಲ ದೊರೆಯುತ್ತದೆ. ಇದನ್ನು ಸಂಪೂರ್ಣವಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಳ್ಳಿ ಸುರೇಶ್ ಮಾತನಾಡಿ ರೈತರು ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿ ದರದಲ್ಲಿ ಯಾವುದೇ ಕಾರಣಕ್ಕೂ ಸಾಲ ಪಡೆದುಕೊಳ್ಳಬಾರದು. ಇದಲ್ಲದೇ ಸಾಲಕ್ಕೆ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಚ್.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಉಪಾಧ್ಯಕ್ಷ ಬಂಡಿಗೌಡರ ರಾಜಣ್ಣ, ಸಿಇಒ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಲಾಕ್ಷಮ್ಮಮಹದೇವಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ ನಾಗರಾಜ್, ಉಪಾಧ್ಯಕ್ಷೆ ಮೀನಾಕ್ಷಿ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿಗಳಾದ ಓಂಕಾರಮೂರ್ತಿ, ಸೋಮೇಶ್, ಪಿಡಿಒ ಉಷಾ ನಂದಿನಿ, ಸಂಘದ ಸ್ಥಾಪಕ ಅಧ್ಯಕ್ಷ ಮಲ್ಲೇಗೌಡ, ಸಂಘದ ಅಧ್ಯಕ್ಷ ರಂಗಪ್ಟ, ನಿರ್ದೇಶಕರಾದ ಶಿವಕುಮಾರ್, ಚನ್ನೇಗೌಡ, ಮಲ್ಲೇಶಪ್ಪ, ವಿಜಯಕುಮಾರ್, ಅಶೋಕ್, ಶಿವಕುಮಾರ್, ಗೋವಿಂದಪ್ಪ, ಕುಮಾರಸ್ವಾಮಿ, ಹೇಮಲತಾ, ರೇಖಾ, ಎಪಿಎಂಸಿ ನಿರ್ದೆಶಕ ಕೋಳಗುಂದ ಪ್ರಸಾದ್, ಕಾಂಗ್ರೆಸ್ ಮುಖಂಡರಾದ ಬೆಳುವಳ್ಳಿ ಮಹದೇವಪ್ಪ, ಡಿಗ್ಗೇನಹಳ್ಳಿ ಬಾಬು, ಜೆಡಿಎಸ್ ಮುಖಂಡರಾದ ಬಂದೂರು ನಾಗಣ್ಣ, ಕಟ್ಟಡ ವಿನ್ಯಾಸ ಇಂಜಿನಿಯರ್ ಜೆ.ಎಸ್.ನಾಗರಾಜ್ ಹಾಗೂ ಮತ್ತಿತರರು ಇದ್ದರು.
Tags
ಅರಸೀಕೆರೆ