ಬೇಲೂರು:ಎತ್ತಿನ ಹೊಳೆ ಯೋಜನೆಗಾಗಿ ಮಾದಿಹಳ್ಳಿ ಹಾಗೂ ಹಳೇಬೀಡು ಹೋಬಳಿಯಲ್ಲಿ ಸುರಂಗ ಹಾಗೂ ನಾಲೆ ಹಾದು ಹೋಗುವ ಮಾರ್ಗದ ಜಮೀನು ಮಾಲೀಕರಿಗೆ ಪರಿಹಾರ ಕೊಡಿಸಲು ಹೋರಾಟ ಮಾಡಲು ಸಿದ್ದರಿದ್ದೇವೆ ಎಂದು ಶಾಸಕ ಕೆಎಸ್.ಲಿಂಗೇಶ್ ಹೇಳಿದರು.
ಬೇಲೂರು ತಾಲ್ಲೂಕು ಗಂಗೂರು ಸಮೀಪ ಎತ್ತಿನಹೊಳೆ ಯೋಜನೆಯ ಕಾಂಕ್ರಿಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ಕೆಲಸಕ್ಕೆ ಶಾಸಕ ಕೆ.ಎಸ್.ಲಿಂಗೇಶ್ ಗುದ್ದಲಿಪೂಜೆ ನೆರವೇರಿಸಿದರು |
ಪರಿಹಾರದ ಹಣ ಕೈಸೇರುವ ವರೆಗೂ ರೈತರು ಕಾಮಗಾರಿಗೆ ಅವಕಾಶ ನೀಡಬಾರಾದು. ಎತ್ತಿನಹೊಳೆ ಯೋಜನೆಯಿಂದ ಗಂಗೂರು, ದೊಡ್ಡಕೋಡಿಹಳ್ಳಿ ಭಾಗದ ಕೆರೆಗಳಿಗೆ ನೀರು ಹರಿಸುವ ಜವಾಬ್ದಾರಿ ನಮ್ಮದು ಎಂದು ಇದೆ ವೇಳೆ ಶಾಸಕರು ತಿಳಿಸಿದರು.
ಗಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫ ಗ್ರಾಮದಲ್ಲಿ ಶನಿವಾರ ಎತ್ತಿನಹೊಳೆ ಯೋಜನೆಯ ಕಾಂಕ್ರೀಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಳೆ ಕಡಿಮೆ ಬೀಳುವ ಗಂಗೂರು ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ನಮ್ಮದು. ಗಂಗೂರು ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಅಲೋಪತಿ ವೈದ್ಯರ ನೇಮಕ ಮಾಡಲಾಗಿದೆ. ಸ್ವಾತಂತ್ರ‍್ಯ ಯೋಧರ ಊರಾದ ಗಂಗೂರು ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಲಾಗಿದೆ.
ರೈತರು ಅಪಾಯ ಮರೆತು ಟ್ರಾನ್ಸ್ ಪಾರ್ಮರ್ ಕಾಟೌಟ್ ಪ್ಯೂಸ್ ಹಾಕುವ ಕೆಲಸ ಮಾಡುತ್ತಿದ್ದಾರೆ. ರೈತರ ಸುರಕ್ಷತೆ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಂತಹಂತವಾಗಿ ವಿದ್ಯುತ್ ಕ್ಷೇತ್ರ ವಿಸ್ತರಣೆ ಮಾಡಲಾಗುವುದು ಎಂದರು.
![]() |
Advertisement |
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಹಾಸನದ ಶಾಸಕ ಪ್ರೀತಂಗೌಡ ವಿರೋಧ ವ್ಯಕ್ತಪಡಿಸುತ್ತಿರುವುದು ಅರ್ಥವಿಲ್ಲದ ಮಾತು. ಉನ್ನತ ಸ್ಥಾನ ಸಿಕ್ಕಿದಾಗ ಹಿರಿಯರ ಅಶಿರ್ವಾದ ಪಡೆಯುವುದು ಭಾರತೀಯ ಸಂಸ್ಕೃತಿ ಎಂದು ಲಿಂಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಬಿ.ರಂಗೇಗೌಡ, ಪಿ.ಎಸ್.ಹರೀಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೂರ್ತಿ ಸದಸ್ಯರಾದ ಶಾಂತಕುಮಾರಿ, ವಿಜಯಲಕ್ಷ್ಮಿ, ಸಣ್ಣೇಗೌಡ, ಪುಷ್ಪಾ, ಮಾಜಿ ಅಧ್ಯಕ್ಷ ಜಿ.ಎಂ.ದೇವರಾಜು, ಎಂಜಿನಿಯರ್‌ಗಳಾದ ಮಂಜುನಾಥ, ಶ್ರೀನಿವಾಸ್, ಪಿಡಿಒ ದಿವ್ಯಾ, ಜೆಡಿಎಸ್ ಮುಖಂಡರಾದ ದಿಲೀಪ್ ಹಗರೆ, ಸಂಗಮ್ ಮತ್ತಿತರರು ಇದ್ದರು