ಕರಗುಂದ ಗ್ರಾಮ ಪಂಚಾಯತಿ ಆವರಣದಲ್ಲಿ ಅಮೃತ ಮಹೋತ್ಸವದ ಸ್ವತಂತ್ರ ದಿನದ ದ್ವಜಾರೋಹಣ

 ಜಾವಗಲ್; ಹೋಬಳಿಯ ಕರಗುಂದ ಗ್ರಾಮ ಪಂಚಾಯತಿ ಆವರಣದಲ್ಲಿ ಅಮೃತ ಮಹೋತ್ಸವದ ಸ್ವತಂತ್ರ ದಿನದ ದ್ವಜಾರೋಹಣ ವನ್ನು ಗ್ರಾ ಪಂ ಅಧ್ಯಕ್ಷೆ ಶೃತಿಮನು ನೇರವೇರಿಸಿದರು,

   ಈ ಸಂದರ್ಭದಲ್ಲಿ ಮಾತನಾಡಿದ ಅವರು 75 ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೆವೆ,ದೇಶ ಇಂದು ಸಾಕಷ್ಟು ವಿಷಯಗಳಲ್ಲಿ ಬದಲಾಗಿದೆ,ಇಂದು ಪ್ರಪಂಚದ ಭೂಪಟದಲ್ಲಿ ಭಾರತ ವಿಶೇಷ ಸ್ಥಾನ ಗಳಿಸಿದೆ ,ಅನೇಕ ಮಹನೀಯರ ಹೋರಾಟ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಬಂದಿದೆ,

ಮಹಾತ್ಮ ಗಾಂಧೀಜಿ,ಬಾಲ ಗಂಗಾಧರ ತಿಲಕ್, ಸರ್ದಾರ ವಲ್ಲಭಭಾಯಿ ಪಟೇಲ್,ಲಾಲ್ ಬಹದ್ದೂರು ಶಾಸ್ತ್ರಿ ಈಗೆ ಮಹನೀಯರ ನೆನಪು

ಮಾಡಿಕೊಳ್ಳಲೇ ಬೇಕು ಇಂತಹ ಮಹನೀಯರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಬಂದಿದ್ದು ಈ ದೇಶದ ಪ್ರತಿಯೊಬ್ಬರು ನೆನಪು ಮಾಡಿಕೊಳ್ಳ ಬೇಕೆಂದರು,

  ಈ ಸಂದರ್ಭದಲ್ಲಿ ಪ. ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ಗ್ರಾ ಪಂ ಉಪಾಧ್ಯಕ್ಷ ಗೊಲ್ಲರಹಳ್ಳಿ ದಯಾನಂದ ಸದಸ್ಯರಾದ ಧನಂಜಯ್,ರಾಮಸ್ವಾಮಿ,ರಘು,ಮಧು,ಶಾರದಮ್ಮ,ಜಯಮ್ಮ,ಕಮಲಮ್ಮ,ಚಂದ್ರಕಲಾ,ಲೀಲಾವತಿ ಹಾಗೂ ಪಂಚಾಯತಿ ಸಿಬ್ಬಂದಿ ಉಪಸ್ಥಿತಿ ಯಿದ್ದರು

Post a Comment

Previous Post Next Post