ಬೇಲೂರು: ಇಲ್ಲಿನ ಸಾರಿಗೆ ಇಲಾಖೆಯ ಕುರುಡು ಮೌನದಿಂದಾಗಿ ರಾಜ್ಯಾದ್ಯಂತ ಪದವಿ ಕಾಲೇಜುಗಳು ಪ್ರಾರಂಭವಾಗಿ ಎರಡು ವಾರ ಕಳೆದರೂ ಗ್ರಾಮೀಣ ಪ್ರದೇಶದ ಕಾಲೇಜು ಮಕ್ಕಳಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸದೆ ಸಾರಿಗೆ ಇಲಾಖೆ ಕುರುಡು ಮೌನವಹಿಸಿದೆ ಎಂದು ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿಬಣ) ಅಧ್ಯಕ್ಷ ವಿ.ಎಸ್. ಬೋಜೇಗೌಡ ಆರೋಪಿಸಿದ್ದಾರೆ.
![]() |
ವಿ.ಎಸ್.ಬೋಜೇಗೌಡ |
ಸಾರಿಗೆ ಡಿಪೋ ಮ್ಯಾನೇಜರ್ ಬೈರೇಗೌಡರ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರು ಹಿಡಿಶಾಪ ಹಾಕುತ್ತಿದ್ದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಲು ಕರವೇ ಸಂಘಟನೆಯ ಬೆಂಬಲ ಕೇಳಿರುತ್ತಾರೆ.
ಇದೇ ತಿಂಗಳು 23 ನೇ ತಾರೀಖಿನಿಂದ ಪ್ರೌಢಶಾಲೆಯ ತರಗತಿ 9, 10 ಹಾಗೂ ಪಿಯು ಕಾಲೇಜು ಪ್ರಾರಂಭಕ್ಕೆ ಸರ್ಕಾರ ಆದೇಶ ಹೊರಡಿಸಿದ್ದರು ಸಾರಿಗೆ ಇಲಾಖೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಪೂರ್ವಸಿದ್ಧತೆ ಮಾಡಿಕೊಳ್ಳದೆ ಚಿಕ್ಕಮಗಳೂರು ಡಿಸಿ ಅವರು ಬೇಜವಾಬ್ದಾರಿತನ ಮಾಡುತ್ತಿರುವುದು ಕಂಡುಬರುತ್ತದೆ ಎಂದು ಬೋಜೇಗೌಡ ಕಿಡಿಕಾರಿದ್ದಾರೆ. ಸಾರಿಗೆ ಇಲಾಖೆ ಸಂಘಟನೆಯ ಕಾಳಜಿಗೆ ಸ್ಪಂದಿಸಿ ಎಲ್ಲಾ ಗ್ರಾಮೀಣ ಭಾಗಗಳಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಿ ಶಾಲಾ-ಕಾಲೇಜು ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಸಂಘಟನೆಯು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ವಿಎಸ್. ಬೋಜೇಗೌಡ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
![]() |
Advertisement |