ಬೇಲೂರು: ಬೇಲೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹೆಬ್ಬಾಳು ಉಮಾಶಂಕರ್ ಅವರನ್ನು ನಾಮನಿರ್ದೇಶನ ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿದೆ.
ಹಿಂದೆ ನಾಮನಿರ್ದೇಶನಗೊಂಡಿದ್ದ ಪೈಂಟ್‌ರವಿ ಅವರಿಂದ ತೆರವುಗೊಂಡಿದ್ದ ಸ್ಥಾನಕ್ಕೆ ಉಮಾಶಂಕರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ನೂತನ ನಾಮಿನಿ ಸದಸ್ಯರನ್ನು ಗೌರವಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಚಿನ್ನೇನಹಳ್ಳಿ ಮಹೇಶ್, ಉಮಾಶಂಕರ್ ನನ್ನ ಬಾಲ್ಯ ಸ್ನೇಹಿತರಾಗಿದ್ದು ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿರುವುದು ಸಂತಸ ತಂದಿದೆ, ಅವರ ರಾಜಕೀಯ ಭವಿಷ್ಯ ಉತ್ತುಂಗಕ್ಕೇರಲಿ ಎಂದು ಹಾರೈಸಿದರು.
ನೂತನ ನಾಮನಿರ್ದೇಶನ ನಿರ್ದೇಶಕ ಉಮಾಶಂಕರ್ ಮಾತನಾಡಿ, ಎಪಿಎಂಸಿ ನಾಮನಿರ್ದೇಶಕನಾಗಿ ನೇಮಕಗೊಳ್ಳಲು ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿಸುರೇಶ್, ತಾಲ್ಲೂಕು ಅಧ್ಯಕ್ಷ ಅಡಗೂರು ಆನಂದ್ ಹಾಗೂ ಪೈಂಟ್‌ರವಿ ಹಾಗೂ ಪಕ್ಷದ ಎಲ್ಲಾ ಪ್ರಮುಖರು ಸಹಕಾರವನ್ನು ನೀಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಎಪಿಎಂಸಿ ಮಾಜಿ ನಾಮನಿರ್ದೇಶನ ನಿರ್ದೇಶಕ ಪೈಂಟ್‌ರವಿ, ಕಾರ್ಯದರ್ಶಿ ಮಧು ಇದ್ದರು.
![]() |
Advertisement |