ಬೇಲೂರು : ಇಲ್ಲಿನ ಸಮಾಜ ಸೇವಕ, ಕನ್ನಡದ ಕಟ್ಟಾಳು, ಸಾ.ರಂ.ಈರೇಗೌಡರಿಗೆ ಚನ್ನರಾಯಪಟ್ಟಣದ ವಂದೇಮಾತರಂ ಸೇವಾ ಸಂಸ್ಥೆಯಿಂದ `ಮಾತೃಭೂಮಿ ಸೇವಾ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು.
ಸನ್ಮಾನಿತರ ನಿವಾಸದಲ್ಲಿ ಆಯೋಜನೆ ಮಾಡಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ವಂದೇಮಾತರಂ ಸೇವಾ ಸಂಸ್ಥೆಯ ನಾಗಣ್ಣ ಇತರ ಗಣ್ಯರು ಸಾ.ರಂ.ಈರೇಗೌಡರನ್ನು ಸನ್ಮಾನಿಸಿದರು.
ಈ ಸಂದರ್ಭ ಮಾತನಾಡಿದ ತಾಲ್ಲೂಕು ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹೆಚ್.ಎಂ.ದಯಾನಂದ್, ಕನ್ನಡ ಭಾಷೆಯ ಪರವಾಗಿ ಹೋರಾಟ ಮಾಡಿಕೊಂಡು ಬಂದಿರುವ ಸಾ.ರಂ.ಈರೇಗೌಡರನ್ನು ಸನ್ಮಾನಿಸುತ್ತಿರುವುದು ಸಂತೋಷದ ವಿಷಯ, ಹತ್ತು ವರ್ಷದಿಂದ ಇಂತಹ ಸೇವಾಕಾರ್ಯದಲ್ಲಿ ತೊಡಗಿರುವ ವಂದೇಮಾತರಂ ಸರ್ಕಾರ ನೆರವು ನೀಡಬೇಕೆಂದರು.
ವಂದೇಮಾತರಂ ಸಂಸ್ಥೆಯ ನಾಗರಾಜು ಮಾತನಾಡಿ, ಸ್ವಾತಂತ್ಯೊçÃತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಸಾ.ರಂ.ಈರೇಗೌಡರು ಸೇರಿದಂತೆ ೭೫ ಜನರನ್ನು ಸನ್ಮಾನಿಸುತ್ತಿರುವುದು ಸಂತೋಷವಾಗಿದೆ. ನಮ್ಮ ಸಂಸ್ಥೆಗೆ ಸರ್ಕಾರದ ಅನುದಾನವಿಲ್ಲ. ಕಷ್ಟದಲ್ಲಿ ನಡೆಸಿಕೊಂಡು ಹೋಗುತ್ತಿದ್ದೇವೆ. ನಾಡಿನಾದ್ಯಂತ ದವಸ ಧಾನ್ಯ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಬೆನ್ನುತಟ್ಟುತ್ತಿದ್ದಾರೆಂದು ಸ್ಮರಿಸಿದರು.
ಸನ್ಮಾನಿತರಾದ ಸಾ.ರಂ.ಈರೇಗೌಡ ಮಾತನಾಡಿ, ಚನ್ನರಾಯಪಟ್ಟಣದ ವಂದೇಮಾತರಂ ಸೇವಾ ಟ್ರಸ್ಟ್ ಪ್ರಮುಖರಾದ ನಾಗರಾಜು ಅವರು, ವೃದ್ಧಾಶ್ರಮ ಆರಂಭಿಸಿರುವುದಲ್ಲದೆ, ಸಮಾಜಸೇವಾ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಹರ್ಷವಾಗಿದೆ. ಸಮಾಜ ವೃದ್ಧರನ್ನು ಗೌರವದಿಂದ ಕಾಣಬೇಕೆಂದರು.
ಕಸಾಪ ಗೌರವ ಕಾರ್ಯದರ್ಶಿ ಬೊಮ್ಮಡಿಹಳ್ಳಿಕುಮಾರಸ್ವಾಮಿ ನಿರೂಪಿಸಿದರು. ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ರಾಜೇಗೌಡ, ಸಮಾಜಸೇವಕ ಮ.ಶಿವಮೂರ್ತಿ, ನಿವೃತ್ತ ಎಂಜಿನಿಯರ್ ಶ್ರೀನಿವಾಸನಾಯಕ್, ಮಾಜಿ ಕಸಾಪ ಅಧ್ಯಕ್ಷ ಅನಂತರಾಜೇಅರಸು, ಸನ್ಮಾನಿತರ ಪತ್ನಿ ಹಾಗೂ ಕುಟುಂಬ ಸದಸ್ಯರು ಇದ್ದರು.