ಮತ್ತೊಮ್ಮೆ ಮದುವೆ ಆದ ನಟ ಪ್ರಕಾಶ್ ರಾಜ್.!

ಬೆಂಗಳೂರು : ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಹುಭಾಷಾ ನಟ ಪ್ರಕಾಶ್​ ರಾಜ್​ ಮದುವೆಯದ್ದೇ ಸದ್ದು. ನಟ ಪ್ರಕಾಶ್ ರಾಜ್ ಮದುವೆ ಫೋಟೋಗಳು ವೈರಲ್ ಆಗಿದ್ದು ಮತ್ತೊಮ್ಮೆ‌ ಮದ್ವೆ ಆದ್ರಾ ಎಂಬ ಪ್ರಶ್ನೆಗಳನ್ನಾ ಹುಟ್ಟು ಹಾಕಿದೆ‌.

ಆದ್ರೆ ವೈರಲ್ ಆಗಿರೋ ಫೋಟೋಗಳ ಅಸಲಿಯತ್ತೆ ಬೇರೆಯಾಗಿದೆ.‌ ತಮ್ಮ ಅದ್ಭುತ ನಟನೆಯ ಮೂಲಕ ಜನ ಮಾನಸದಲ್ಲಿ ಮನೆ ಮಾಡಿರುವ ಪ್ರಕಾಶ್​ ರಾಜ್ ಮತ್ತೊಮ್ಮೆ ಮದುವೆಯಾಗಿದ್ದೇನೋ ನಿಜಾ., ಆದ್ರೆ ಅವರು ಮದ್ವೆ ಆಗಿರೋದು ಅವರ ಹೆಂಡತಿಯನ್ನೇ.

ಹೌದು, ತಮ್ಮ ಮಡದಿ ಪೋನಿ ವೆರ್ಮಾ ಅವರನ್ನು ಮತ್ತೊಮ್ಮೆ ಮದುವೆಯಾಗಿ ಪ್ರಕಾಶ್ ರಾಜ್ ಸುದ್ದಿಯಲ್ಲಿದ್ದಾರೆ. 11 ವರ್ಷಗಳ ದಾಂಪತ್ಯ ಜೀವನ ನಡೆಸಿರುವ ಪ್ರಕಾಶ್​​ ರಾಜ್​- ಪೋನಿ ವೆರ್ಮಾ ದಂಪತಿಗೆ ವೇದಾಂತ್​ ಎಂಬ ಮಗನಿದ್ದಾನೆ. ಈಗ ಈ ದಂಪತಿಗಳು ಮತ್ತೊಮ್ಮೆ ಮದುವೆಯಾಗಿರುವುದು ಸಹ ತಮ್ಮ ಮಗನಿಗಾಗಿಯೇ ಅಂತೆ.

ಇನ್ನೂ ಈ ವಿಚಾರವನ್ನು‌ ಪ್ರಕಾಶ್​ ರಾಜ್​ ತಮ್ಮ ಟ್ವಿಟರ್ ಖಾತೆಯಲ್ಲಿ ಮತ್ತೆ ಮದುವೆಯಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಮ್ಮ ಮಗನಿಗಾಗಿ ಈ ರಾತ್ರಿ ನಾವು ಮತ್ತೆ ಮದುವೆಯಾದೆವು. ನಮ್ಮ ಮದುವೆಗೆ ಮಗ ವೇದಾಂತ್ ಸಾಕ್ಷಿಯಾಗಿದ್ದ ಎಂದು ಬರೆದುಕೊಂಡಿದ್ದಾರೆ.

ಒಂದು ಫೋಟೋದಲ್ಲಿ ಪ್ರಕಾಶ್​ ರಾಜ್​ ದಂಪತಿ ತಮ್ಮ ಮಗನನ್ನು ಸಾಕ್ಷಿಯಾಗಿಟ್ಟುಕೊಂಡು ಮದುವೆಯಾಗಿದ್ದಾರೆ. ಪ್ರಕಾಶ್​ ರಾಜ್ ತಮ್ಮ ಮಡದಿ ಪೋನಿ ವೆರ್ಮಾಗೆ ಉಂಗುರ ತೊಡಿಸುತ್ತಿದ್ದರೆ, ಮಗ ವೇದಾಂತ್ ಅವರಿಬ್ಬರ ಮದುವೆಗೆ ಸಾಕ್ಷಿಯಾಗಿದ್ದಾನೆ.

ಮತ್ತೊಂದು ಫೋಟೊದಲ್ಲಿ ಪ್ರಕಾಶ್​ ರಾಜ್​-ಪೋನಿ ವೆರ್ಮಾ ಲಿಪ್​ಕಿಸ್ ಮಾಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಪ್ರಕಾಶ್ ರಾಜ್ ಅವರ ಇಬ್ಬರು ಹೆಣ್ಣು ಮಕ್ಕಳು ಇದ್ದು, ಸಂಪೂರ್ಣ ಕುಟುಂಬ ಸೆರೆಯಾಗಿದೆ

ಅಂದ್ಹಾಗೆ ಪ್ರಕಾಶ್​ ರಾಜ್​​ಗೆ ತಮ್ಮ 45ನೇ ವಯಸ್ಸಿನಲ್ಲಿ ಪೋನಿ ಮೇಲೆ ಪ್ರೀತಿ ಹುಟ್ಟಿತು. 2010ರಲ್ಲಿ ತಮ್ಮ ಗೆಳೆಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

Post a Comment

Previous Post Next Post