ತಾಲ್ಲೂಕು ಪತ್ರಕರ್ತ ಸಂಘದಿಂದ ಮಾದ್ಯಮ ದಿನಾಚರಣೆ : ಪತ್ರಕರ್ತ ಬಿ.ಎಲ್ ಲಕ್ಷ್ಮಣ್ ಗೆ ಸನ್ಮಾನ

 ಬೇಲೂರು: ಇಲ್ಲಿನ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಮಾಧ್ಯಮ ದಿನಾಚರಣೆಯನ್ನು ಶ್ರೀ ಚನ್ನಕೇಶವ ದಾಸೋಹ ಭವನದಲ್ಲಿ ಆಯೋಜಿಸಲಾಗಿತ್ತು.

ಈ ಸಂಧರ್ಭದಲ್ಲಿ  ಶಾಸಕ ಲಿಂಗೇಶ್  ಮಾತನಾಡಿ ಕೊರೋನಾದ ಸಂಕಷ್ಟದ ಸಮಯದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಸುದ್ದಿ ಮಾಡುವ ಮೂಲಕ ನಿಜವಾದ  ಕೊರೋನಾ ವಾರಿಯರ್ಸ್ ಗಳಂತೆ ಈಗಾಗಲೇ ರಾಜ್ಯದಲ್ಲಿ ಸುಮಾರು ೭೫ ಕ್ಕೂ ಹೆಚ್ಚು ಪತ್ರಕರ್ತರನ್ನು ಕೋವೀಡ್ ಸಂದರ್ಭದಲ್ಲಿ ಕಳೆದುಕೊಂಡಿದ್ದು ನಿಜಕ್ಕೂ ಬೇಸರದ ಸಂಗತಿ.ಇಂತಹ ಸಂದಿಗ್ಧ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ಅವರೂ ಕೂಡ ವಾರಿಯರ್ಸ್ ಅವರ ಕ್ಷೇಮಾಭಿವೃದ್ಧಿಗೆ ನಮ್ಮ ಜನತಾ ಟ್ರಸ್ಟ್ ವತಿಯಿಂದ ೧ ಲಕ್ಷ ರೂಗಳನ್ನು ನೀಡಲಾಗುವುದು.ಅಲ್ಲದೆ ಸುದ್ದಿಗಳನ್ನು ನಿಸ್ಪಕ್ಷವಾಗಿ ಮಾಡುವ ಮೂಲಕ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಣ್ ತೆರಸುವ ಕೆಲಸ ಮಾಧ್ಯಮ ಗಳು ಮಾಡುತ್ತಿದ್ದು, ಯಾವುದೇ ತಪ್ಪು ಗಳನ್ನು  ಅಧಿಕಾರಿಗಳು ಜನಪ್ರತಿನಿಧಿಗಳು ಮಾಡಿದಾಗ ಅವುಗಳ ಬಗ್ಗೆ ವರದಿ ಮಾಡುವ ಮೂಲಕ ಅವರನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.


ಪ್ರತೀವರ್ಷ ಮಾಧ್ಯಮ ದಿನಾಚರಣೆ  ಆಚರಿಸುವ ಉದ್ದೇಶ,ಇತ್ತೀಚಿಗೆ ಮಾಧ್ಯಮಕ್ಕೆ ಬರುತ್ತಿರುವ ಯುವಜನಾಂಗ ಹೆಚ್ಚು ಕ್ರಿಯಾಶೀಲರಾಗಬೇಕಿದೆ.ಅಲ್ಲದೆ ಈ ಹಿಂದೆ ಕೆಲಸ ಮಾಡಿದ ಹಿರಿಯರ ಕೆಲಸವನ್ನು ನೋಡಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಓದುಗರನ್ನು ಮುಟ್ಟುವಂತಹ ನೈಜ್ಯ ಸುದ್ದಿಗಳನ್ನು ವರದಿ ಮಾಡುವಂತಹ ಕೆಲಸ ಮಾಡಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ಪತ್ರಕರ್ತ ತೊ,ಚ,ಅನಂತಸುಬ್ಬರಾಯ್ ಹೇಳಿದರು.


ಜಿಲ್ಲಾಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ ಪತ್ರಕರ್ತರು ಸ್ವತಃ ಮೌಲ್ಯಾಧಾರಿತ ಬರಹಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕಿದೆ.ಅಲ್ಲದೆ ಜಿಲ್ಲಾ ಸಂಘದಿಂದ ಎಲ್ಲಾ ಪತ್ರಕರ್ತರಿಗೆ ಕಾರ್ಯಗಾರವನ್ನು ಅತೀ ಶೀಘ್ರದಲ್ಲೇ ಏರ್ಪಡಿಸಲಾಗುವುದು.ಜಿಲ್ಲಾ ಸಂಘದ ಕ್ಷೇಮಾಭಿವೃದ್ಧಿ ಯಲ್ಲಿ ೨೨ ಲಕ್ಷ ಜಮವಾಗಿದ್ದು ಇದನ್ನು ೫೦ ಲಕ್ಷ ಮಾಡುವ ಮೂಲಕ ಸಂಕಷ್ಟ ದಲ್ಲಿರುವ ಪತ್ರಕರ್ತರಿಗೆ ನೆರವಾಗುವಂತಹ ಕೆಲಸವನ್ನು ಮಾಡಲಾಗುವುದು ಎಂದರು.


ನಂತರ ರಾಜ್ಯಕಾರ್ಯಕಾರಣಿ ಸದಸ್ಯ ರವಿನಾಕಲಗೂಡು ಮಾತನಾಡಿ ಪತ್ರಕರ್ತರ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯಾಧ್ಯಕ್ಷರಾದ ಶಿವಾನಂದ್ ತಗಡೂರು ಹಾಗೂ ಹೆಚ್ ಬಿ ಮದನ್ ಗೌಡರ ಪರಿಶ್ರಮದಿಂದ ಕೊವೀಡ್ ನಿಂದ ಮೃತಪಟ್ಟ ಪತ್ರಕರ್ತ ಕುಟುಂಬಗಳಿಗೆ ಸರ್ಕಾರದಿಂದ ೫ ಲಕ್ಷ ಪರಿಹಾರ ನೀಡಿಸುವಲ್ಲಿ ಅವರ ಶ್ರಮ ನಿಜಕ್ಕೂ ಶ್ಲಾಘನೀಯ. ಆದರೆ ಇತ್ತೀಚಿನ ದಿನಗಳಲ್ಲಿ ಒಬ್ಬೊಬ್ಬ ಪತ್ರಕರ್ತರು ಒಂದೊಂದು ಪಕ್ಷದಲ್ಲಿ ಗುರುತಿಸುವ ಮೂಲಕ ಪತ್ರಿಕೋದ್ಯಮ ದಿಕ್ಕು ಹಾದಿತಪ್ಪುವಂತಾಗುತ್ತಿದೆ.ಯುವ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಹಾಗೆಯೇ ಪ್ರತೀ ತಾಲೂಕಿನಲ್ಲಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಕೆಲಸ ನಿರ್ವಹಿಸುವ ಕಷ್ಟದಲ್ಲಿರುವಂತಹ ಪತ್ರಕರ್ತರಿಗೆ ನೆರವು ನೀಡಲು ಮುಂದಾಗಬೇಕು ಎಂದರು.

Advertisement


ಈ ಸಂಧರ್ಭದಲ್ಲಿ  ಪತ್ರಕರ್ತರಾದ ಬಿಎಲ್ ಲಕ್ಷ್ಮಣ್ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಡಿಬಿ ಮೋಹನ್ ಕುಮಾರ್,ಕಾರ್ಯದರ್ಶಿ ರಾಘವೇಂದ್ರ ಎ ಹೊಳ್ಳ,ರಾಜ್ಯ ಸಮಿತಿ ಸದಸ್ಯ ಅತಿಕುಲ್ ರೆಹಮಾನ್,ಗ್ರಾಮೀಣ ಕಾರ್ಯದರ್ಶಿ ಭಾರತೀಗೌಡ,ಖಜಾಂಚಿ ಜಗದೀಶ್,ಮಾಜಿ ಅಧ್ಯಕ್ಷ ತಾರನಾಥ್,ಅನಂತು,ಮಂಜುನಾಥ ಶೆಟ್ಟಿ,ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಹೆಚ್ ಎಮ್ ದಯಾನಂದ್ ಉಪಸ್ಥಿತರಿದ್ದರು.

Post a Comment

Previous Post Next Post