ಬೇಲೂರು : ಇಲ್ಲಿನ ರಾಜ್ಯ ರಸ್ತೆಸಾರಿಗೆ ನಿಗಮದ ಬಸ್ ನಿಲ್ದಾಣಕ್ಕೆ ಸಾರಿಗೆ ಇಲಾಖೆಯ ಚಿಕ್ಕಮಗಳೂರು ವಿಭಾಗದ ಜಿಲ್ಲಾಧಿಕಾರಿ ವೀರೇಶ್ ಭೇಟಿ ನೀಡಿ ನೀಡಿದ್ದರು.
![]() |
ಬೇಲೂರಿನ ಬಸ್ ನಿಲ್ದಾಣಕ್ಕೆ ಆಗಮಿಸಿದ ಸಾರಿಗೆ ಇಲಾಖೆ ಚಿಕ್ಕಮಗಳೂರು ವಿಭಾಗದ ಡಿಸಿ ವೀರೇಶ್ ಇತರ ಅಧಿಕಾರಿಗಳು ನಿಲ್ದಾಣದ ಕಾಮಗಾರಿ ವೀಕ್ಷಿಸಿದರು |
ಹಾಸನದಲ್ಲಿ ಸಭೆಯೊಂದರಲ್ಲಿ ಪಾಲ್ಗೊಂಡು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಅಧಿಕಾರಿಗಳ ಸಭೆಗೆ ತೆರಳುವ ವೇಲೆ ನಿಲ್ದಾಣಕ್ಕೆ ಭೇಟಿ ನೀಡಿ ನಿಲ್ದಾಣದ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿ ಸಾರಿಗೆ ಇಲಾಖೆಯ ಎಂಜಿನಿಯರ್ ಅವರೊಟ್ಟಿಗೆ ಚರ್ಚಿಸಿ ಎಂಜಿನಿಯರ್ ಅವರಿಂದ ಕೆಲವೊಂದು ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಸಾರಿಗೆ ನಿಗಮದ ಡಿಟಿಒ ದಿನೇಶ್, ಸೆಕ್ಯೂಟರಿ ಆಫೀಸರ್, ಸೆಂಟ್ರಲ್ ಆಫೀಸ್‌ನ ಅಧಿಕಾರಿಗಳು ಇದ್ದರು.
![]() |
Advertisement |