ಬೇಲೂರು:ಇಲ್ಲಿನ ಶ್ರೀಚನ್ನಕೇಶವಸ್ವಾಮಿ ದೇವಾಲಯದ ಹಿಂಭಾಗ ಇರುವ ಶಿಥಿಲಗೊಂಡಿದ್ದ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ಅನ್ನು ಪುರಸಭೆಯಿಂದ ಕೆಡವಿಸಲಾಯಿತು.
೫೦ ವರ್ಷಗಳ ಹಿಂದೆ ನಿರ್ಮಿಸಿದ್ದ ಈ ಟ್ಯಾಂಕ್ ಕುಡಿಯುವ ನೀರಿನ ಸರಬರಾಜಿಗೆ ಜನಸಂಖ್ಯೆಗೆ ಅನುಗುಣವಾಗಿ ನಿರ್ಮಾಣ ಮಾಡಲಾಗಿದ್ದ ಈ ಟ್ಯಾಂಕ್ ವರ್ಷ ಕಳೆದಂತೆ ಗುಣಮಟ್ಟ ಕಳೆದುಕೊಂಡು ಸೋರಲಾರಂಬಿಸಿತು. ಕಳೆದ ೧೦ ವರ್ಷದಿಂದ ಹೆಚ್ಚು ಹಾನಿಗೊಳಗಾಗಿತ್ತು. ಟ್ಯಾಂಕ್ ಶಿಥಿಲಗೊಂಡಿದ್ದು ಯಾವುದೆ ಸಂದರ್ಭ ಬೀಳುವ ಆತಂಕವನ್ನು ಟ್ಯಾಂಕ್ ಅಕ್ಕಪಕ್ಕದ ನಿವಾಸಿಗಳು ವ್ಯಕ್ತಪಡಿಸಿದ್ದಲ್ಲದೆ ಪುರಸಭೆಗೆ ದೂರನ್ನು ನೀಡಿದ್ದರು.
ಈ ಬಗ್ಗೆ ಕಾಯೋನ್ಮುಖರಾದ ಪುರಸಭೆಯ ಮುಖ್ಯಾಧಿಕಾರಿ ಸುಜಯ್ ಅವರು ಮೇಲಾಧಿಕಾರಿಗಳಿಗೆ ಪತ್ರ ಬರೆದು ಟ್ಯಾಂಕ್ ಶಿಥಿಲಗೊಂಡಿರುವ ಹಾಗೂ ಟ್ಯಾಂಕ್ ಬಿದ್ದರೆ ಆಗುವ ಪರಿಣಾಮ ಕುರಿತು ಮಾಹಿತಿ ಒದಗಿಸಿದ್ದರು.
![]() |
Advertisement |
ಮೇಲಾಧಿಕಾರಿಗಳಿಂದ ಅನುಮತಿ ದೊರತದ್ದರಿಂದ ಇಂದು ಟ್ಯಾಂಕ್ ಅನ್ನು ಕೆಡವಲಾಯಿತು. ಟ್ಯಾಂಕ್ ಕೆಡವುದರಲ್ಲಿ ಪರಿಣಿತಿ ಹೊಂದಿರುವ ಭರತ್ ಟ್ರೇರ‍್ಸ್ ಕಾರ್ಮಿಕರು ಟ್ಯಾಂಕ್ ಅನ್ನು ಕೆಡವಿದರು. ಇನ್ನು ೩ ಅಥವಾ ೪ ದಿನದಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.