ಬೇಲೂರು:ಹಳೇಬೀಡು-ಬೇಲೂರು ಪ್ರವಾಸಿ ಕ್ಷೇತ್ರದ ಅಭಿವೃದ್ಧಿ, ಆನೆಹಾವಳಿ ತಡೆಗೆ ಕ್ರಮ, ಶ್ರೀಚನ್ನಕೇಶವಸ್ವಾಮಿ ದೇಗುಲ ಯಾರಿಗೆ ಸೇರಿದ್ದೆಂಬ ಗೊಂದಲ ನಿವಾರಣೆ.
ಇಲ್ಲಿಗೆ ಆಗಮಿಸಿದ ಕೇಂದ್ರದ ಕೃಷಿ ರಾಜ್ಯ ಸಚಿವೆ ಶೋಭಾಕರಂದ್ಲಾಜೆ ಅವರು ವ್ಯಕ್ತಪಡಿಸಿದ ಪ್ರಮುಖ ಅಭಿಪ್ರಾಯಗಳಿವು. ಬೇಲೂರು ಶ್ರೀಚನ್ನಕೇಶವಸ್ವಾಮಿ ದೇವಾಲಯ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ್ದೊ ಅಥವಾ ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡಲಿದೆಯೊ ಎಂಬುದನ್ನು ಮನನ ಮಾಡಿಕೊಂಡು ಗೊಂದಲ ನಿವಾರಿಸುವ ಪ್ರಯತ್ನ ಮಾಡುತ್ತೇನೆ. ಪ್ರವಾಸೋಧ್ಯಮ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಲ್ಲಿ ಚರ್ಚಿಸಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಹೇಳಿದರು.
ಬೇಲೂರಿಗೆ ಆಗಮಿಸಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಬೇಲೂರು ದೇಗುಲದಲ್ಲಿ ದರ್ಶನ ಪಡೆದರು. |
ಜನಾಶೀರ್ವಾ ಯಾತ್ರೆ ಅಭಿಯಾನದ ಮೂಲಕ ಬೇಲೂರಿಗೆ ಆಗಮಿಸಿ ಶ್ರೀಚನ್ನಕೇಶವಸ್ವಾಮಿ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿಕರು ಆಹಾರ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು, ಮಾಡಬೇಕು, ಬೆಳೆಯಲ್ಲಿ ಹೆಚ್ಚು ಇಳುವರಿ ತೆಗೆಯಲು ಚಿಂತನೆ ಮಾಡಬೇಕೆಂದು ಸಲಹೆ ನೀಡಿದರು.
ಉತ್ತಮ ಇಳುವರಿಯೊಂದಿಗೆ ಗುಣಮಟ್ಟದ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಿ ಇನ್ನು ಹೆಚ್ಚಿನ ಲಾಭಾಂಶವನ್ನು ರೈತರು ಪಡೆಯಬಹುದಾಗಿದೆ. ಪ್ರಧಾನಿ ನರೇಂದ್ರಮೋದಿ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ೧.೨೩ ಲಕ್ಷ ಕೋಟಿ ರೂ.ಮೀಸಲಿರಿಸಿದ್ದಾರೆ. ಹೆಚ್ಚುವರಿಯಾಗಿ ೧ ಲಕ್ಷ ಕೋಟಿಯನ್ನು ಕಾಯ್ದಿರಿಸಿದ್ದಾರೆ. ಇದು ಪ್ರಧಾನಿಗೆ ಕೃಷಿ ಕ್ಷೇತ್ರದ ಮೇಲಿರುವ ಅಭಿಮಾನ ಎಂದರು.
ಕೇಂದ್ರದ ಬಿಜೆಪಿ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಯೋಜನೆ ರೂಪಿಸಿದ್ದಾರೆ. ಇದರಿಂದ ರೈತರ ಆಧಾಯ ಹೆಚ್ಚಾಗಲಿದೆ. ಸರ್ಕಾರ ರೈತರ ಪರವಾಗಿರುವುದನ್ನು ಸಹಿಸದ ವಿರೋಧಪಕ್ಷಗಳು ಸುಕಾಸುಮ್ಮನೆ ಟೀಕೆ ಮಾಡುತ್ತಿವೆ. ರೈತರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ವರಿಷ್ಠರು, ಕೃಷಿ ಖಾತೆಯ ಜವಾಬ್ದಾರಿ ನೀಡಿದ್ದಾರೆ. ರೈತರ ಜೀವನ ಮಟ್ಟವನ್ನು ಮತ್ತಷ್ಟು ಸುಧಾರಣೆ ಮಾಡುವ ದೃಷ್ಟಿಕೋನ ಇಟ್ಟುಕೊಂಡು ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಭರವಸೆ ಮತ್ತು ನಂಬಿಕೆ ಇದೆ ಎಂದು ಹೇಳಿದರು.
ಹಾಸನ ಜಿಲ್ಲೆ ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಅನೆಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ. ಹಾಸನದಲ್ಲಿ ಆಲೂಗೆಡ್ಡೆ ಸಂಶೋಧನಾ ಕೇಂದ್ರ ಸ್ಥಾಪನೆ, ಕಾಫಿ ಬೆಳೆಗಾರರ ಸಮಸ್ಯೆ, ಮುಸುಕಿನ ಜೋಳ ಬೆಳೆ ಸೇರಿದಂತೆ ಇನ್ನೂ ಉಳಿದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಇತ್ಯಾದಿಗಳ ಕುರಿತು ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳ ಭೇಟಿ ಮಾಡುವುದಿದೆ. ಇದರಿಂದ ಸ್ಥಳೀಯವಾಗಿ ಇರುವ ನೈಜ ಸಮಸ್ಯೆಗಳ ಅರಿವಾಗಲಿದೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇನೆ.
ನಾನು ಕೃಷಿ ಸಚಿವೆಯಾದ ಬಳಿಕ ಎನ್‌ಡಿಆರ್‌ಎಫ್‌ನಲ್ಲಿ ಬಾಕಿ ಉಳಿದ ೬೨೦ ಕೋಟಿ ರೂ. ಬಿಡುಗಡೆ ಮಾಡಿಸಿದ್ದೇನೆ. ಸದ್ಯದಲ್ಲೇ ರೈತರಿಗೆ ನೀಡಲು ನೀಡಲಾಗುವುದು. ಕೋವಿಡ್ ಸಂದರ್ಭದಲ್ಲಿ ಅನ್ಯ ದೇಶಗಳಲ್ಲಿ ಆಹಾರಕ್ಕೆ ಕೊರತೆಯಿತ್ತು. ಆದರೆ ನಮ್ಮ ದೇಶದಲ್ಲಿ ಸಮಸ್ಯೆ ಉಂಟಾಗಲಿಲ್ಲ. ಆಹಾರ, ಹಣ್ಣು, ತರಕಾರಿ ಸೇರಿದಂತೆ ದಿನ ನಿತ್ಯದ ಅಗತ್ಯ ವಸ್ತುಗಳು ಕಾಲಕಾಲಕ್ಕೆ ದೊರಕುತ್ತಿದ್ದವು. ಇದನ್ನು ಮೊದಲು ವಿಪಕ್ಷಗಳು ಟೀಕಿಸುವುದನ್ನು ಬಿಟ್ಟು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಮುಂದಿನ ದಿನದಲ್ಲಿ ಜಿಲ್ಲಾವಾರು ಅಧಿಕಾರಿಗಳ ಸಭೆ ನಡೆಸಲಾಗುವುದು. ಬೇಲೂರು ಹಾಗೂ ಹಳೇಬೀಡು ಅಭಿವೃದ್ಧಿ ಕುರಿತಾದ ಬಿಡುಗಡೆಯಾದ ಹಣ ವಾಪಸ್ಸಾಗಿದೆ ಎಂದಾದರೆ ಆ ಬಗ್ಗೆ ಸಂಬAಧಿಸಿದ ಅಧಿಕಾರಿಗಳಲ್ಲಿ ಚರ್ಚಿಸಿ ವಾಪಸ್ ತರಿಸುವುದಾಗಿ ಹೇಳಿದ ಸಚಿವೆ, ಈ ಪ್ರವಾಸಿಕ್ಷೇತ್ರವನ್ನು ಪ್ರವಾಸೋಧ್ಯಮದ ದೃಷ್ಠಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.
Advertisement |
ಪಟ್ಟಣಕ್ಕೆ ಆಗಮಿಸಿದ ವೇಳೆ ಬಸವೇಶ್ವರ ಭಾವಚಿತ್ರ, ಮಾಗಡಿ ಕೆಂಪೇಗೌಡ ಪ್ರತಿಮೆ, ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಉಸ್ತುವಾರಿ ಸಚಿವ ಗೋಪಾಲಯ್ಯ. ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಳ್ಳಿಸುರೇಶ್, ರಾಜ್ಯ ರೈತಮೋರ್ಚ ಕಾರ್ಯಕಾರಣಿ ಸದಸ್ಯ ರೇಣುಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ರಾಜ್ಯ ಒಕ್ಕಲಿಗರ ನಿಗಮ ಮಂಡಳಿಯ ಸದಸ್ಯೆ ಸುರಭಿರಘು, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಬೇಲೂರು ಹಳೇಬೀಡು ಪ್ರಾಧಿಕಾರದ ಅಧ್ಯಕ್ಷ ಎ.ಎಸ್.ಬಸವರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್, ಯುವ ಘಟಕದ ಅಧ್ಯಕ್ಷ ನಂದಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಮ್.ದಯಾನಂದ್, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯೆ ವಿಜಯಲಕ್ಷ್ಮಿ, ಎಪಿಎಂಸಿ ಮಾಜಿ ನಾಮಿನಿ ಸದಸ್ಯ ಪೈಂಟ್ ರವಿ, ಪುರಸಭೆ ಮಾಜಿ ಸದಸ್ಯ ಮಂಜುನಾಥ, ದೇಗುಲದ ಇಒ ವಿದ್ಯುಲ್ಲತಾ, ಬಿಜೆಪಿ ತಾಲೂಕು ಪದಾಧಿಕಾರಿಗಳಾದ ಕೋಗಿಲೆಮನೆ ಅರುಣ್‌ಕುಮಾರ್ ಪ್ರಮುಖರಾದ ರಂಗನಾಥ್, ಗಂಗೂರು ಶಿವಕುಮಾರ್, ಸಂತೋಷ್, ಶರತ್, ಜಗದೀಶ್ ಇತರರು ಇದ್ದರು.