ಹಾಸನದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ಆಚರಣೆ

ಹಾಸನ ಸೆ.15 :-ನಗರದ ಎನ್ ಆರ್. ವೃತ್ತದಲ್ಲಿರುವ ಎಸ್.ಬಿ.ಐ ಪ್ರಾದೆಶಿಕ ಕಚೇರಿ ವಿಭಾಗದ ವತಿಯಿಂದ ಸರ್.ಎಂ. ವಿಶ್ವೇಶ್ವರಯ್ಯ ಜಯಂತಿ ಹಾಗೂ ಇಂಜಿನಿಯರ್ ದಿನಾಚರಣೆ ಆಚರಿಸಲಾಯಿತು. 


ಇದೇ ವೇಳೆ ನಗರದ ಎನ್.ಆರ್. ವೃತ್ತದಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷರಾದ ಈ. ಕೃಷ್ಣೇಗೌಡ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀಪತಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನ ಎನ್.ಆರ್ ವೃತ್ತದ ಮುಖ್ಯ ವ್ಯವಸ್ಥಾಪಕರಾದ ಬಾಲಸುಬ್ರಹ್ಮಣ್ಯ, ಸಾಲ ವಿಭಾಗದ ಮುಖ್ಯ ವ್ಯವಸ್ಥಾಪಕರಾದ ಭವಾನಿ ಅವರು ಮಾಲಾರ್ಪಣೆ ಮಾಡಿದರು. 

ಇದೇ ವೇಳೆ ಎನ್.ಆರ್. ವೃತ್ತದ ಎಸ್.ಬಿ.ಐ ಪ್ರಾದೇಶಿಕ ಕಚೇರಿ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷರಾದ ಈ. ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು.

Post a Comment

Previous Post Next Post