ಬೇಕಾಗಿರುವ ಸಾಮಗ್ರಿಗಳು?
1) 10 ಲೀಟರ್ ನಾಟಿ ಹಸುವಿನ ಮೂತ್ರ
2) 2ಕೆಜಿ ಎಕ್ಕೆ ಎಲೆ (ಬಿಳಿ ಎಕ್ಕೆ ಎಲೆ ಇದ್ದರೆ ಉತ್ತಮ)
3) 2ಕೆಜಿ ಹರಳುಪ್ಪು
4) ಅರ್ಧ ಕೆಜಿ ಸುಣ್ಣದಕಲ್ಲು
5) ಎರಡು ನಿಂಬೆಹಣ್ಣು
6) 20 ಲೀಟರ್ ನೀರು ಹಿಡಿಯುವ ಬ್ಯಾರೆಲ್
ತಯಾರಿಸುವ ವಿಧಾನ?
ಮೊದಲಿಗೆ ಎಕ್ಕೆ ಎಲೆಯನ್ನು ಚೆನ್ನಾಗಿ ಅರೆದು ಕೊಳ್ಳಬೇಕು, ಎಕ್ಕೆ ಎಲೆ ಪೇಸ್ಟ್ 10 ಲೀಟರ್ ಗೋಮೂತ್ರಕ್ಕೆ ಬೆರೆಸಬೇಕು ನಂತರ ಅರ್ಧ ಕೆಜಿ ಸುಣ್ಣದ ಕಲ್ಲನ್ನು ಬೆರೆಸಬೇಕು ಈ ಮಿಶ್ರಣಕ್ಕೆ 2ಕೆಜಿ ಹರಳು ಉಪ್ಪು ಬೇರೆಸಿ ಪ್ರದಕ್ಷಣೆ ಕಾರದಲ್ಲಿ ತಿರುಗಿಸಿ ಸರಿಯಾಗಿ ಬೆರೆಯುವಂತೆ ಮಾಡಬೇಕು ನಂತರ ಬ್ಯಾರೆಲ್ ನಾ ಮೇಲ್ಬಾಗವನ್ನು ಸರಿಯಾಗಿ ಮುಚ್ಚಿ ಒಂದು ವಾರ ಕೊಳೆಯಲು ಬಿಡಬೇಕು ಒಂದು ವಾರದ ನಂತರ ತಯಾರಾದ ಮಿಶ್ರಣಕ್ಕೆ ಎರಡು ನಿಂಬೆ ಹಣ್ಣಿನರಸ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಹೀಗೆ ತಯಾರಾದ ಮಿಶ್ರಣವನ್ನು ಒಂಬತ್ತು ಲೀಟರ್ ನೀರಿಗೆ 1ಲೀಟರ್ ಮಿಶ್ರಣವನ್ನು ಹಾಕಿ ಸಿಂಪರಣೆ ಮಾಡಬೇಕು.
ಉಪಯೋಗಿಸುವ ವಿಧಾನ?
ಸಿಂಪರಣೆ ಮಾಡುವಾಗ ಮುಖ್ಯ ಬೆಳೆಗೆ ತಾಗದಂತೆ ಸಿಂಪರಣೆಯನ್ನು ಮಾಡಬೇಕು.
ಮಳೆ ಬರುವಾಗ ಉಪಯೋಗಿಸಬಾರದು ಕಳೆ ನಾಶವಾಗಲು ಒಂದು ವಾರ ಸಮಯ ಬೇಕು.
ಇದರಿಂದ ಉಪಯೋಗವೇನು?
1)ಇದನ್ನು ಉಪಯೋಗಿಸುವುದರಿಂದ ಭೂಮಿಯು ಮೃದುವಾಗುತ್ತದೆ .
2) ನಾಶವಾದ ಕಳೆ ಗೊಬ್ಬರವಾಗಿ ಮರು ಪಡುತ್ತದೆ.
3) ಭೂಮಿಯಲ್ಲಿರುವ ಜೀವಾಣುಗಳು ವೃದ್ಧಿಯಾಗುತ್ತವೆ.
ರೈತರು ಇದನ್ನು ಬಳಸಿ ಅವರ ಅನುಭವವನ್ನು ಗಣನೆಗೆ ತೆಗೆದುಕೊಂಡಾಗ ಅವರ ಪ್ರಕಾರ 1 ಅಡಿಗಿಂತ ಕಡಿಮೆ ಇರುವ ಕಳೆಗಳಿಗೆ ಇದು ತುಂಬಾ ಪರಿಣಾಮಕಾರಿ.ಸೂಚನೆ :ಇದನ್ನು ಬಳಸುವ ಮೊದಲು ನಿಮಗೆ ಹತ್ತಿರದ ಕೃಷಿ ಅಧಿಕಾರಿಗಳು ಅಥವಾ ಕೃಷಿ ವಿಜ್ಞಾನಿ ಗಳ ಸಲಹೆ ಪಡೆದುಕೊಂಡು ಬಳಸಬೇಕಾಗಿ ವಿನಂತಿ.
ಮಾಹಿತಿ :
ವಿಲಾಸ್ ಕಬ್ಬೂರ್
ಕೃಷಿ ವಿದ್ಯಾರ್ಥಿ