ಜಾವಗಲ್: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆ ಬುಧವಾರ ನಡೆಯಿತು.
ಸಂಘದ ಆವರಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅರುಣ್ ಹಾಗೂ ಗೋಪಾಲಕೃಷ್ಣ ನಾಮಪತ್ರ ಸಲ್ಲಿಸಿದರು.ಗೋಪಾಲಕೃಷ್ಣ 4ಮತಗಳು ಪಡೆದರೆ, ಅರುಣ್ ಅವರು 8 ಮತಗಳು ಪಡೆದು ಜಯಶೀಲರಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಅಭಿವೃದ್ಧಿ ಅಧಿಕಾರಿ ಪರಮೇಶ್ ತಿಳಿಸಿದರು.
ನೂತನ ಅಧ್ಯಕ್ಷರಾದ ಅರುಣ್ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್, ಎಪಿಎಂಸಿ ನಿರ್ದೇಶಕ ದೇಶಾಣಿ ದೇವರಾಜ್, ಸಹಕಾರ ಸಂಘದ ನಿರ್ದೇಶಕರಾದ ಮಂಜುನಾಥಶೆಟ್ಟಿ,ಪಾಪಣ್ಣ, ಗೋವಿಂದನಾಯ್ಕ ಸಿದ್ದಪ್ಪಶೆಟ್ಟಿ,ಲೋಕೆಶ್, ನೇರ್ಲಿಗೆ ಸಹಕಾರ ಸಂಘದ ನಿರ್ದೇಶಕರಾದ ಶಿವಕುಮಾರ್,
ಬಿ ಜೆ ಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಸಾಲೆ ರಮೇಶ
ಬಿ ಜೆ ಪಿ ಮುಖಂಡರಾದ ಶಾಂತಕುಮಾರ್, ನಾಗೇಂದ್ರ, ಸಂತೋಷ,ಸೋಮಶೇಖರ್, ಗ್ರಾಮಸ್ಥರಾದ ಶ್ರೀನಿವಾಸ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
ಸಂಘದ ಕಾರ್ಯದರ್ಶಿ ಪರಮೇಶ್, ಹಾಗೂ ಸಿಬ್ಬಂದಿ ಉಪಸ್ಥಿತಿಯಿದ್ದರು.
![]() |
Advertisement |