ಬೇಲೂರು ಪುರಸಭೆ ಚುನಾವಣೆಗೆ ಸರ್ಕಾರದ ಆದೇಶ

 ಬೇಲೂರು: ಕೋವಿಡ್ ಹಿನ್ನಲೆಯಲ್ಲಿ ಮುಂದೂಡಿಕೊಂಡು ಬರಲಾಗಿದ್ದ ಬೇಲೂರು ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಎಂ.ರವಿಕುಮಾರ್ ಅವರು ಸೆಪ್ಟಂಬರ್ 21 ರಂದು ಆದೇಶ ಹೊರಡಿಸಿದ್ದಾರೆ. 

ಸರ್ಕಾರದ ಆದೇಶದ ಪ್ರತಿ

ಚುನಾವಣೆ ನಡೆಸುವ ಸಂಬಂಧ, ಸಚಿವ ಸಂಪುಟವು ಸೆಪ್ಟೆಂಬರ್ 20 ರಂದು ಚರ್ಚೆ ನಡೆಸಿ ಚುನಾವಣೆ ನಡೆಸಲು ತೀರ್ಮಾನ ಕೈಗೊಂಡಿತ್ತು. ಅದರಂತೆ ಸಂಧಿಸಿದ ಜಿಲ್ಲಾಧಿಕಾರಿಗಳಿಗೆ ಮುಂದಿನ ಕ್ರಮ ಕೈಗೊಳ್ಳಬೇಕಾದ ಕ್ರಮದ ಕುರಿತು ಆದೇಶ ಪತ್ರ ರವಾನೆಯಾಗಿದೆ.

ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳು, ಜಿಲ್ಲಾಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯತ್, ವಿವಿಧ ಸೊಸೈಟಿ ಗಳ ಅಧ್ಯಕ್ಷ-ಉಪಾಧ್ಯಕ್ಷ-ಪದಾಧಿಕಾರಿಗಳ ಆಯ್ಕೆ ಬಗ್ಗೆ ಕೋವಿಡ್ ನಿಯಮಾವಳಿ ಪಾಲನೆ ಮೂಲಕ  ಚುನಾವಣೆ ನಡೆಅಬಹುದೆಂದೂ ಆದೇಶದಲ್ಲಿ ತಿಳಿಸಲಾಗಿದೆ.

ಚುನಾವಣೆ ದಿನಾಂಕ ನಿಗಧಿ ಇನ್ನಿತರ ಕ್ರಮವನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳು  ಕೈಕೊಳ್ಳಲಿದ್ದಾರೆ.

ಚ.ನಾ.ದಾನಿ 

ಬೇಲೂರು ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆದಲ್ಲಿ ಅಧ್ಯಕ್ಷರಾಗಿ ಸ್ಪಷ್ಟ ಬಹುಮತವಿರುವ ಕಾಂಗ್ರೆಸ್‌ನ ಚ.ನಾ.ದಾನಿ ಗಾದಿ ಅಲಂಕರಿಸಲಿದ್ದಾರೆ. ಉಪಾಧ್ಯಕ್ಷರು ಯಾರೆಂಬುದು ತಿಳಿದುಬಂದಿಲ್ಲವಾದರೂ ಹಿರಿತನ ಹಾಗೂ ಪಕ್ಷಕ್ಕೆ ಕೆಲಸ ಮಾಡಿರುವವರಿಗೆ ಆಧ್ಯತೆ ಇದೆಯೆಂದು ಪಕ್ಷದ ಮೂಲಗಳು ತಿಳಿಸಿವೆ.

ವರದಿ:ಅನಂತರಾಜೇಅರಸು

Post a Comment

Previous Post Next Post