ಅರಸೀಕೆರೆ ನಗರದ ತಾಲೂಕು ಕಚೇರಿ ಆವರಣದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಕೇಂದ್ರ ಸರ್ಕಾರ ಘೋಷಿಸಿರುವ ದಿನಾಂಕ 14 ಸೆಪ್ಟೆಂಬರ್ ದಿನವನ್ನು ಹಿಂದಿ ದಿವಸ ಎಂದು ಘೋಷಣೆ ಮಾಡಿರುವ ವಿರುದ್ಧ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜಯಕರ್ನಾಟಕ ಸಂಘಟನೆ ನಗರ ಅಧ್ಯಕ್ಷ ಅರುಣ್ ಭಾರತ ಸಂವಿಧಾನ ಆರ್ಟಿಕಲ್ 344 ಪ್ರಕಾರ ಭಾರತ ಸರ್ಕಾರವು ತನ್ನ ದೇಶದ 22 ಭಾಷೆಗಳಿಗೆ ರಾಷ್ಟ್ರೀಯ ಸ್ಥಾನಮಾನವನ್ನು ನೀಡಿದೆ ಅದರಲ್ಲಿ ಕನ್ನಡ ಮತ್ತು ಹಿಂದಿ ಸಹ ಸೇರಿದೆ ಆದರೆ ಹಿಂದಿಯನ್ನು ರಾಷ್ಟ್ರೀಯ ಭಾಷೆಯೆಂದು ಉಲ್ಲೇಖ ಮಾಡಿಲ್ಲ ಸರ್ಕಾರದ ಈ ಆದೇಶವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಜಯ ಕರ್ನಾಟಕ ತಾಲೂಕು ಅಧ್ಯಕ್ಷ ವಿನೋದ್ ಕುಟ್ಟಿ ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು
ಜಯಕರ್ನಾಟಕ ಸಂಘಟನೆಯ ಯುವ ಘಟಕದ ಅಧ್ಯಕ್ಷ
ಸುದರ್ಶನ್ ಮಾತನಾಡಿ ಭಾರತ ಸಂವಿಧಾನ ಆರ್ಟಿಕಲ್ 343 ಪ್ರಕಾರ ಭಾರತದ ಸಂವಿಧಾನವು ಅನುಷ್ಠಾನಕ್ಕೆ ತಂದು 26 ಜನವರಿ 1950 ರಿಂದ ಮುಂದಿನ 12 ವರ್ಷಗಳವರೆಗೆ ದೇವನಗರಿ ಲಿಪಿಯನ್ನು ಮತ್ತು ಇಂಗ್ಲಿಷ್ ಭಾಷೆಯನ್ನು ಕೇಂದ್ರಸರ್ಕಾರದ ಆಡಳಿತ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ ಆದರೆ ಸರ್ಕಾರದ ಈ ಸೆಪ್ಟೆಂಬರ್ 14 ಹಿಂದಿ ದಿವಸ್ ಆಚರಣೆ ನ ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಜಯಕರ್ನಾಟಕ ನಗರ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.
Tags
ಅರಸೀಕೆರೆ