ಬೇಲೂರು: ರಾಜ್ಯದಲ್ಲಿ ೭ ಕೋಟಿ ಹತ್ತಿರದ ಜನಸಂಖ್ಯೆ ಇದ್ದಾರೆ. ಆದರೆ ಪರಿಷತ್ತಿನಲ್ಲಿ ಕೇವಲ ೩.೧೦ ಲಕ್ಷ ಸದಸ್ಯರಿದ್ದಾರೆ. ನಮ್ಮ ಅವಧಿಯಲ್ಲಿ ಕನಿಷ್ಠ ೧೦ ಲಕ್ಷ ಸದಸ್ಯರನ್ನು ಮಾಡುವ ಗುರಿ ಹೊಂದಿದ್ದೇನೆಂದು ರಾಜ್ಯ ಕನ್ನಡ ಸಾಹಿತ್ಯಪರಿಷತ್ತು ಅಧ್ಯಕ್ಷ ಆಕಾಂಕ್ಷಿ ನಾಡೋಜ ಡಾ.ಮಹೇಶಜೋಶಿ ಹೇಳಿದರು.
![]() |
ಬೇಲೂರಿನಲ್ಲಿ ಡಾ.ಮಹೇಶ್‌ಜೋಶಿ ಮಾತಾಡಿದರು |
ಇಲ್ಲಿನ ಕನ್ನಡ ಸಾಹಿತ್ಯಪರಿಷತ್ತು ಭವನದಲ್ಲಿ ಮಾತನಾಡಿದ ಅವರು, ಸೈನಿಕರು, ವಿಕಲಚೇತನರಿಗೆ ಉಚಿತವಾಗಿ ಸದಸ್ಯತ್ವ ನೀಡಲು ಬದ್ಧನಾಗಿದ್ದೇನೆ. ಸದಸ್ಯತ್ವ ಶುಲ್ಕವನ್ನು ೨೫೦ ರೂ.ಗಳಿಗೆ ಇಳಿಕೆ ಮಾಡುವ ಆಲೋಚನೆಯಿದೆ. ಕನ್ನಡನಾಡು, ಭಾಷೆ, ನೆಲ, ಜಲ ಇವುಗಳಿಗೆ ಯಾವುದೇ ರೀತಿ ಆತಂಕ ಎದುರಾದರೂ ಹೋರಾಟ ನಡೆಸಲು ಹಿಂಜರಿಕೆ ಮಾಡುವುದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಪೂರ್ಣ ಪ್ರಮಾಣದಲ್ಲಿ ಪಾರದರ್ಶಕತೆ ಹೊಂದಬೇಕಿದೆ. ಇದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್ ಅನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಪರಿಷತ್ತಿನಲ್ಲಿ ಹಾಲಿ ಇರುವ ಹಲವಾರು ಹಳೆಯ ನಿಯಮಗಳನ್ನು ಬದಲಾಯಿಸುವ ಅಗತ್ಯವಿದೆ. ಗ್ರಾಮೀಣ ಭಾಗದಲ್ಲಿ ಸಂಚರಿಸಿ ಪರಿಷತ್ತಿನ ಬಗ್ಗೆ ಅರಿವು ಮೂಡಿಸುವ ಉದ್ದೇಶವಿದೆ. ಕೇಂದ್ರ ಸರಕಾರದ ಕೈಗಾರಿಕೆ, ಉಧ್ಯಮದಲ್ಲಿ ಕನ್ನಡಿಗರಿಗೆ ಹುದ್ದೆ ಮೀಸಲಿಗೆ ಒತ್ತಡ ಹೇರಲಾಗುವುದು. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು, ಕನ್ನಡ ಶಾಲೆ ಮುಚ್ಚದಂತೆ ಕ್ರಮ, ಪರಿಷತ್ತಿನಲ್ಲಿ ನಿಬಂಧನೆಗಳ ಪರಿಷ್ಕರಣೆ, ಕಾರ್ಯಕಾರಿ ಸಮಿತಿಯಲ್ಲಿ ಸಾಮಾಜಿಕ ನ್ಯಾಯ, ಯುವ ಸಾಹಿತಿಗಳಿಗೆ ಉತ್ತೇಜನ, ಸಮ್ಮೇಳನದಲ್ಲಿ ಮಹಿಳಾ ಅಧ್ಯಕ್ಷರಿಗೆ ಪ್ರಾತಿನಿಧ್ಯ, ರಾಷ್ಟç ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಮ್ಮೇಳನ ಹೀಗೆ ಹತ್ತಾರು ರೀತಿಯ ಆಲೋಚನೆ ನನ್ನದಾಗಿದ್ದು ನಿಮ್ಮಗಳ ಆಶೀರ್ವಾದ ಇರಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಹಿಂದಿ ಹೇರಿಕೆ ಪ್ರಭಲವಾಗಿ ಖಂಡಿಸುತ್ತೇನೆ. ಕನ್ನಡದ ಪ್ರಥಮ ಶಿಲಾಶಾಸನ ದೊರೆತ ಹಲ್ಮಿಡಿಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಪ್ರತಿವರ್ಷ ಹಲ್ಮಡಿ ಉತ್ಸವ ನಡೆಸುತ್ತೇನೆಂದು ಡಾ. ಮಹೇಶ್ ಜೋಶಿ ಭರವಸೆ ನೀಡಿದರು.
ಕರ್ನಾಟಕ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜು, ಮಾತನಾಡಿ, ಡಾ.ಮಹೇಶಜೋಶಿ ಅವರು, ನಿಸ್ವಾರ್ಥತೆಯಿಂದ ತಮ್ಮ ಹುದ್ದೆ ನಿಭಾಯಿಸಿದ್ದಾರೆ. ರಾಜ್ಯದ ಜನತೆಯ ಮನೆ ಮಾತಾಗಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇವರಿಗೆ ಪರಿಷತ್ತಿನ ಸದಸ್ಯರೆಲ್ಲರ ಸಹಕಾರ, ಕೃಪೆ ಇರಬೇಕೆಂದರು. ಈ ವೇಳೆ ನಬೀರ್ ಸಾಬ್ ಕುಷ್ಟಗಿ ಮತ್ತು ರಾಮಲಿಂಗಶೆಟ್ಟಿ, ಸ್ಥಳೀಯರಾದ ಸಂಶೋಧಕ ಡಾ.ಶ್ರೀವತ್ಸ ಎಸ್.ವಟಿ, ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಕಸಾಪ ಕಾರ್ಯದರ್ಶಿ ಬೊಮ್ಮಡಿಹಳ್ಳಿಕುಮಾರಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ರಾಜೇಗೌಡ, ಕಸಾಪ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ, ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ಬೇ.ನ.ತಾರಾನಾಥ್ ಸಾಹಿತಿ ಇಂದ್ರಮ್ಮ, ಕೇಬಲ್ ವಿಜಯಕುಮಾರ್ ಇತರರು ಇದ್ದರು.