ಹಾಸನದ ನಾಲ್ಕು ದೇವಾಲಯಗಳು ಅನಧಿಕೃತ ಧಾರ್ಮಿಕ ಮಂದಿರಗಳ ಪಟ್ಟಿಗೆ ಸೇರ್ಪಡೆ.

ಹಾಸನ : ಹಾಸನದ ನಾಲ್ಕು ದೇವಸ್ಥಾನಗಳು ಅನಧಿಕೃತ ಧಾರ್ಮಿಕ ಮಂದಿರಗಳ ಪಟ್ಟಿಗೆ ಸೇರಿದೆ, ಸರ್ಕಾರದ ಮುಂದಿನ ಆದೇಶ ಪ್ರಕಟವಾಗುವವರೆಗೆ ಈ ದೇವಾಲಯಗಳನ್ನು ತೆರವುಪಡಿಸಲು ಮುಂದಾಗುವುದಿಲ್ಲ ಎಂದು ಹಾಸನದ ಜಿಲ್ಲಾಡಳಿತ ತಿಳಿಸಿದೆ.

ಹಾಸನ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಅರಸೀಕೆರೆ ತಾಲ್ಲೂಕಿನ ಬೊಮ್ಮೇನಹಳ್ಳಿಯ ಪ್ಲೇಗಿನಮ್ಮ ಮತ್ತು ಕಾರೇಹಳ್ಳಿಯ ಮಾರ್ಗದಮ್ಮ ದೇವಸ್ಥಾನ, ಚನ್ನರಾಯಪಟ್ಟಣ - ಶ್ರವಣಬೆಳಗೊಳ ನಡುವಿನ ಜನಿವಾರ ಕೆರೆ ಏರಿ ಮೇಲಿರುವ ಏರಿ ಮಾರಮ್ಮ ಮತ್ತು ಹಾಸನ ತಾಲ್ಲೂಕಿನ ಶಾಂತಿಗ್ರಾಮ - ಹೊಂಗೆರೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಗಳು ಜಿಲ್ಲೆಯ ಅನಧಿಕೃತ ಧಾರ್ಮಿಕ ಕಟ್ಟಡಗಳ ಪ್ರತಿಯಲ್ಲಿ ಸೇರಿದೆ ಎಂಬ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಜನರ ಹಾಗೂ ಸರ್ಕಾರದ ಮುಂದಿನ ನಿಲುವಿನ ನಂತರದಲ್ಲಿ ಈ ಕುರಿತು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಿ ಮುಂದಿನ ಕೆಲಸದ ಕುರಿತು ನಿರ್ಧರಿಸಲಾಗುತ್ತದೆ ಎಂದು ಹಾಸನ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಸಾರ್ವಜನಿಕ ರಸ್ತೆಯ ವ್ಯಾಪ್ತಿಗೆ ಒಳಪಡುವ ಹಾಗೂ ರಸ್ತೆಯ ಮಧ್ಯದಲ್ಲಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ 2006 ರಲ್ಲಿಯೆ ಆದೇಶ ಹೊರಡಿಸಿತ್ತು, ಆ ಸಂದರ್ಭದಿಂದ ಇಲ್ಲಿಯವರೆಗೆ ಹಲವಾರು ಧಾರ್ಮಿಕ ಮಂದಿರಗಳನ್ನು ತೆರವು ಗೊಳಿಸಲಾಗಿದೆ. ಈ ವಿಷಯವನ್ನು ಶಾಸಕರ ಗಮನಕ್ಕೂ ಅಧಿಕಾರಿಗಳು ತಂದಿದ್ದು ಮುಂದಿನ ದಿನಗಳಲ್ಲಿ ಈ ಕುರಿತು ಸಮರ್ಪಕ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Post a Comment

Previous Post Next Post