ಸಾಹಿತ್ಯದ ಚಿಂತನೆಯಲ್ಲಿ ಸಮಾಜದ ಏಳ್ಗೆಯ ತುಡಿತವಿರುತ್ತದೆ. ಸಮಾಜಮುಖಿ ಸಾಹಿತ್ಯ ಬರವಣಿಗೆಗಳು ಸಮಾಜವನ್ನು ಬದಲಾಯಿಸುವಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತವೆ. ಸಾಹಿತ್ಯದ ಓದು ಮನಸ್ಸಿಗೆ ಸಂತೋಷ ಕೂಡ ಕೊಡುತ್ತದೆ ಎಂದು ಲೇಖಕಿ ಶ್ರೀಮತಿ ಶೈಲಜಾಹಾಸನ್ ತಿಳಿಸಿದರು. ಹಾಸನ ಜಿಲ್ಲಾ ಸಿರಿಗನ್ನಡ ಮಹಿಳಾ ವೇದಿಕೆ ಹಾಗೂ ಅರಸೀಕರೆ ತಾಲ್ಲೂಕು ಘಟಕದ ಪ್ರಥಮ ವಾರ್ಷಿಕೋತ್ಸವ ಜೂಮ್ ಸಂಗಮ ಅಂತರ್ಜಾಲ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರು ಎ.ಹೇಮಗಂಗಾ ಮಾತನಾಡಿ 2003ರಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬಂದು ಇಂದು ರಾಜ್ಯ ಹೊರರಾಜ್ಯಗಳಲ್ಲಿ ಘಟಕ ಹೊಂದಿ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷರು ರಜನಿ ಅಶೋಕ ಜೀರಿಗ್ಯಾಳ ಮಾತನಾಡಿ ದಿ.ಎಂ.ಎಸ್.ವೆಂಕಟರಾಮಯ್ಯನವರು ಒಂದು ಮಾದರಿ ಕನ್ನಡ ಸಾಹಿತ್ಯ ಸಂಸ್ಥೆ ಕಟ್ಟಿ ಬೆಳಸಿಹೋಗಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಉತ್ತಮ ಕನ್ನಡ ಕಾರ್ಯಕ್ರಮ ರೂಪಿಸಿ ನಡೆಸಿಕೊಂಡು ಹೋಗೋಣವೆಂದರು. ಹಾಸನ ಸಿರಿಗನ್ನಡ ವೇದಿಕೆ ಗೌ.ಅಧ್ಯಕ್ಷರು ಗೊರೂರು ಅನಂತರಾಜು ಮಾತನಾಡಿ ವೆಂಕಟರಾಮಯ್ಯನವರ ಆಶಯದಂತೆ ಹಾಸನ ಜಿಲ್ಲಾ ಘಟಕವು 2006ರಲ್ಲಿ ಪ್ರಾರಂಭವಾಗಿ ಈವರೆಗೂ ಶಾಲಾಕಾಲೇಜುಗಳಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಸಿಕೊಂಡುಬಂದಿದೆ ಎಂದರು. ಶ್ರೀಮತಿ ಮಾಲಾ ಚೆಲುವನಹಳ್ಳಿ ಒಂದು ವರ್ಷ ವೇದಿಕೆ ನಡೆದುಬಂದ ಹಾದಿ ಕುರಿತು ಮಾತನಾಡಿದರು. ಜಿಲ್ಲೆಯ ಸಾಹಿತಿ ಚಲನಚಿತ್ರ ನಿರ್ದೇಶಕ ಸಿದ್ದುಪೂರ್ಣಚಂದ್ರ ಅವರು ಮುಖ್ಯ ಅತಿಥಿಗಳಾಗಿ ತಮ್ಮ ನಿರ್ದೇಶನದ ದಾರಿ ಯಾವುದಯ್ಯಾ ವೈಕುಂಠಕ್ಕೆ ಚಿತ್ರವು 110 ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕುರಿತು ಮಾಹಿತಿ ಹಂಚಿಕೊಂಡರು. ಖ್ಯಾತ ಗಾಯಕರು ಶಶಿಧರ್ ಕೋಟೆ, ಶಂಕರ್ ಹಾಡುಗಾರಿಕೆಯಲ್ಲಿ ಮನಸೆಳೆದರು. ಚಲನಚಿತ್ರ ಹಾಸ್ಯನಟ ಮೈಸೂರು ರಮಾನಂದ್ ನಗೆಹನಿಗಳಿಂದ ರಂಜಿಸಿದರು. ಕುಮಾರ್ ಛಲವಾದಿ ಏಕಪಾತ್ರಾಭಿನಯ ಪ್ರದರ್ಶಿಸಿದರು.
ಹಾಸನದ ಕು.ಅಕಾಂಕ್ಷ ಕೊಳಲುವಾದನ ಶೇತಾ ಮೋಹನ್ ಬಾಚಣಿಗೆಯಲ್ಲಿ ಹಾಡುಗಾರಿಕೆ ಕು. ಪ್ರಹರಿ ಅಭಿನಯ ಗೀತೆ, ಕು.ಪ್ರಣತಿ ಪಿ.ಹರಿತ್ಸಾ ಛದ್ಮವೇಷ, ಬಸವರಾಜ್ ಉಮ್ರಾಣಿ ಮಾನವ ಕಂಪ್ಯೂಟರ್ ಹಚ್ಚೇವು ಕನ್ನಡದ ದೀಪ ಸಮೂಹ ಗೀತೆ, ಗಮಕಿ ವಿದ್ಯಾಶಂಕರ್ ಪ್ರಾರ್ಥನೆ ಎಲ್ಲವೂ ಸೊಗಸಾಗಿದ್ದವು. ಪ್ರತಿನಿಧಿ ಪತ್ರಿಕೆ ಸಂಪಾದಕರು ಡಾ.ಉದಯರವಿ, ಸಿರಿಗನ್ನಡ ಪತ್ರಿಕೆ ಸಂಪಾದಕರು ಆನಂದ ಪಟೇಲ್ ನೆಲ್ಲಿಗೆರೆ, ವೇದಿಕೆ ರಾಜ್ಯ ಉಪಾಧ್ಯಕ್ಷರು ಪದ್ಮ ಶ್ರೀಧರ್, ಸಿ.ಎನ್.ಉಮೇಶ್, ದ.ಕ.ಜಿಲ್ಲಾದ್ಯಕ್ಷರು ವಸಂತಲಕ್ಷ್ಮಿ, ಬೆಳಗಾವಿ ಜಿಲ್ಲಾಧ್ಯಕ್ಷರು ಜಯಾ ಚುರುಮುರಿ,ತೆಲಂಗಣ ಸಿಖಂದರಾಬಾದ್ ಪರಿಮಳ ಜೋಶಿ, ಕವಿ ಎನ್.ಎಲ್.ಚನ್ನೇಗೌಡರು, ಡಾ.ಬರಾಳು ಶಿವರಾಮ್,
Tags
ಹಾಸನ