ಬೇಲೂರು: ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ರಾಜ್ಯಯುವ ನೀತಿ ರೂಪಿಸಲು ಮುಂದಾಗಿರುವ ಸರ್ಕಾರ, ಈ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸಿದೆ.
ಮೈಸೂರಿನ ಸ್ವಾಮಿ ವಿವೇಕಾನಂದ ಯುವ ಚಳವಳಿಯ ಸಂಸ್ಥಾಪಕ ಡಾ.ಬಾಲಸುಬ್ರಮಣ್ಯಂ ಅಧ್ಯಕ್ಷತೆಯಲ್ಲಿ ರಚಿಸಿರುವ ಈ ಸಮಿತಿಯಲ್ಲಿ ರಾಷ್ಟ್ರಧರ್ಮ ಸಂಘಟನೆ ಸಂಸ್ಥಾಪಕರೂ ಆಗಿರುವ ಬೇಲೂರಿನ ಸಂತೋಷ್ ಕೆಂಚಾಂಬ ಸೇರಿದಂತೆ 10 ಮಂದಿ ಸದಸ್ಯರಿದ್ದಾರೆ.
ಚಕ್ರವರ್ತಿ ಸೂಲಿಬೆಲೆ, ಸಂಕಲ್ಪ್ ಶೆಟ್ಟರ್, ಮಲ್ಲಿಕಾರ್ಜುನ್ ಬಿ. ಪಾಟೀಲ್, ಡಾ.ಡಿ.ಎಸ್.ಕೃಷ್ಣ, ಐಶ್ವರ್ಯ ದಿವೇಶ್, ಕೆ.ನಾಗಣ್ಣ ಗೌಡ, ವಿನೋದ್ ಕೃಷ್ಣಮೂರ್ತಿ, ಎಂ.ಎನ್.ನಟರಾಜ್, ಡಾ. ಪ್ರತಾಪ್ ಲಿಂಗಯ್ಯ ತಜ್ಞರ ಸಮಿತಿಯ ಇತರ ಸದಸ್ಯರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರದ ಅಪರ ಕಾರ್ಯದರ್ಶಿ ಶಾಲಿನಿ ರಜನೀಶ್ ಸಮಿತಿಯ ವಿಶೇಷ ಆಹ್ವಾನಿತರಾಗಿದ್ದು, ಇಲಾಖೆಯ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.