ಬೇಲೂರು : ಭಾರತೀಯರ ಸಂಸ್ಕಾರಯುತ ಬದುಕಿನ ಜೀವನ ಚರಿತ್ರೆಯನ್ನು ರಾಮಾಯಣ ಮಹಾಗ್ರಂಥವು ಬಿಂಬಿಸುತ್ತಿದೆ ಎಂದು ಶಾಸಕ ಕೆಎಸ್.ಲಿಂಗೇಶ್ ಹೇಳಿದರು.
ಇಲ್ಲಿನ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯ ರಚನೆಯನ್ನು ಮಾಡಿದ ವಾಲ್ಮೀಕಿ ಮಹರ್ಷಿಗೆ ರಾಮಾಯಣ ಗ್ರಂಥದ ಕೀರ್ತಿ ಸಲ್ಲಬೇಕಿದೆ ಎಂದರು. ರಾಮಾಯಣದಲ್ಲಿ ಭರತಖಂಡದಲ್ಲಿನ ಅರಣ್ಯ, ಪರ್ವತ, ನದಿ, ಸರೋವರ, ಸಮುದ್ರಗಳು ಮತ್ತು ಜಲಪಾತಗಳ ಸೌಂದರ್ಯವನ್ನು ವರ್ಣಿಸಿದ್ದಾರೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ ಎಂದು ಹೇಳಿದರು.
ಸಾಹಿತಿ ಚಲಂ ಹಾಡ್ಲಹಳ್ಳಿ ಮಾತನಾಡಿ, ಇಂತಹ ಅನನ್ಯವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಹಾಗೂ ಮಹಾಕಾವ್ಯವನ್ನು ಮಹಾಕವಿ ಕಾಳಿದಾಸ, ನೆಹರು, ಕುವೆಂಪುರಂತಹ ಮಹಾನ್ ಪುರುಷರು ಹಾಡಿಹೊಗಳಿದ್ದಾರೆ. ಇಂತಹ ವ್ಯಕ್ತಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ನಮ್ಮದಾಗಿದೆ. ರಾಮಾಯಣ ರಚಿಸಿದ ವಾಲ್ಮೀಕಿ ಬಗ್ಗೆ ಇಂದಿಗೂ ಜಿಜ್ಞಾಸೆ ಇರುವುದು ಸಹಜ, ವಾಲ್ಮೀಕಿ ಇತಿಹಾಸ ಅಥವಾ ಐತಿಹಾಸಿಕ ಪುರುಷರೇ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಅದರೂ ವಾಲ್ಮೀಕಿ ರಚಿಸಿದ ರಾಮಾಯಣ ನಿಜಕ್ಕೂ ದೊಡ್ಡ ಗ್ರಂಥವಾಗಿದೆ ಎಂದ ಅವರು ಸರ್ಕಾರದಿಂದ ಇತ್ತೀಚಿನ ನಡೆಯುತ್ತಿರುವ ಮಹಾನ್ ಪುರುಷರ ಜಯಂತಿಗಳ ಅವಶ್ಯಕತೆ ಬಗ್ಗೆ ಸುಧೀರ್ಘ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಮೋಹನ್‌ಕುಮಾರ್ ಮಾತನಾಡಿ, ಜಾಗತಿಕ ಮಹಾಕಾವ್ಯಗಳ ಸಾಲಿನಲ್ಲಿ ಭಾರತದ ಮಹಾಕವಿಗಳಿಗೆ ಮಹತ್ವದ ಸ್ಥಾನವಿದೆ. ಚರಿತ್ರೆ ಪರಂಪರೆೆ ಗಳೊಂದಿಗೆ ಸಂಂಬಂಧಿಸಿದ ಪ್ರಸ್ತುತ ಸಂದರ್ಭಗಳಿಗೆ ಮುಖಮುಖಿಯಾಗುವ ಅಪರೂಪದ ಕಾವ್ಯಗಳಲ್ಲಿ ವ್ಯಾಸ ಮತ್ತು ವಾಲ್ಮೀಕಿ ಕೃತಿಗಳು ಇಂದಿಗೂ ಮಹತ್ವ ಪಡೆದಿವೆ. ಇದುವರೆಗೆ ಜಗತ್ಪçಸಿದ್ಧ ವಿಮರ್ಶಕರು ಗುರುತಿಸಿರುವ ಮತ್ತು ವ್ಯಾಖ್ಯಾನಿಸಿರುವ ಸಂದರ್ಭಗಳ ಹಿನ್ನಲೆಯಲ್ಲಿ ಹೇಳುವುದಾದರೆ ಮಹಾಭಾರತ ಮತ್ತು ರಾಮಾಯಣ ಮಾನವ ಬದುಕಿನ ಅಸಂಖ್ಯ ಆಯಾಮಗಳನ್ನು ಬಿಂಬಿಸುವ ಕೃತಿಗಳಾಗಿವೆ. ಮೂಲತ: ಕೌಟುಂಬಿಕ ಕೃತಿ ಎಂದೆನಿಸಬಹುದಾದರೂ ಆಳದಲದಲ್ಲಿ ಮತ್ತು ವ್ಯಾಪ್ತಿಯಲ್ಲಿ ವಿರಾಟ್ ಸ್ವರೂಪವನ್ನು ಈ ಎರಡೂ ಕೃತಿಗಳು ಹೊಂದಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಪವರ್ತಯ್ಯ, ವಾಲ್ಮೀಕಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಕುಮಾರ್ ನಾಯ್ಕ್, ಲಕ್ಷö್ಮಣನಾಯಕ, ಪುರಸಭಾ ವ್ಯವಸ್ಥಾಪಕ ಮಂಜುನಾಥ ಇನ್ನೂ ಮುಂತಾದವರು ಹಾಜರಿದ್ದರು.