ರಾಮನಾಥಪುರ: ಹೋಬಳಿ ಕೆರಗೋಡು ಗ್ರಾಮದ ವಾಸಿ ಚಿದಾನಂದ ರವರಿಗೆ ಸೇರಿದ ಕೆರಗೋಡು ಗ್ರಾಮದ ಸ.ನಂ.3/14 ರ ವಿಸ್ತೀರ್ಣ 0-22 ಗುಂಟೆ ಪ್ರದೇಶದಲ್ಲಿ ಬೆಳೆದಿರುವ ಅಡಿಕೆ ಮರಗಳಿಗೆ ದಿನಾಂಕ -20-10-2021 ರಂದು ಸುರಿದ ಬಾರಿ ಮಳೆಗೆ ಹಾಗೂ ಸಿಡಿಲು ಗುಡುಗಿಗೆ ಸುಮಾರು 72 ಮರಗಳು ಹಾನಿಯಾಗಿದ್ದು ಹಾನಿಯಾಗಿದ್ದ ಸ್ಥಳಕ್ಕೆ ರಾಜಸ್ವನಿರೀಕ್ಷಕರಾದ ಸಿ.ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಮನಾಥಪುರ ಹೋಬಳಿಯಲ್ಲಿ ಬಾರಿ ಮಳೆ ಸುರಿದ ಪರಿಣಾಮ ಗುಡುಗು ಸಿಡಿಲಿಗೆ ಕೆರಗೋಡು ಗ್ರಾಮದ ವಾಸಿ ಚಿದಾನಂದರವರಿಗೆ ಸೇರಿದ ಸುಮಾರು 72 ಮರಗಳು ಹಾನಿಯಾಗಿದ್ದು ಹಾನಿಯಾಗಿರುವ ಮರಗಳಿಗೆ ಪರಿಹಾರ ನೀಡುವ ಸಲುವಾಗಿ ಕಡತ ತಯಾರಿಸಿ ಮಾನ್ಯ ತಹಶೀಲ್ದಾರರಿಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿಗಳಾದ ಪ್ರದೀಪ್ ಕಾಂಬ್ಳೆ ಗ್ರಾಮಸಹಾಯಕರಾದ ರವಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
Tags
ಅರಕಲಗೂಡು