ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಪರಿಷತ್ ಘನತೆ ಹೆಚ್ಚಿಸುವ ಭರವಸೆ : ಬೇಲೂರಿನಲ್ಲಿ ಪ್ರೋ.ಹೆಚ್.ಎಲ್.ಮಲ್ಲೇಶಗೌಡ ಮತಯಾಚನೆ

ಬೇಲೂರು : ಸಾಹಿತ್ಯ ಮತ್ತು ಸಾಂಸ್ಕೃತಿಕ ಸೈದ್ದಾಂತಿಕ ನೆಲೆಗಟ್ಟಿನ ಮೇಲೆ ಪರಿಷತ್ತು ಘನತೆ ಹೆಚ್ಚಿಸುವ ಮತ್ತು ಪಾರದರ್ಶಕ ಆಡಳತಕ್ಕೆ ಮುನ್ನುಡಿ ಬರೆಯಲು ಸಾಹಿತ್ಯಾಭಿಮಾನಿಗಳು ನನಗೆ ಬೆಂಬಲಿಸಬೇಕು ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಹೆಚ್.ಎಲ್.ಮಲ್ಲೇಶಗೌಡ ಮನವಿ ಮಾಡಿದರು.

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಎಚ್.ಎಲ್.ಮಲ್ಲೇಶಗೌಡ ಬೇಲೂರಿನಲ್ಲಿ ಮತಯಾಚಿಸಿದರು


ಪಟ್ಟಣದಲ್ಲಿ ವಿವಿಧ ಸಾಹಿತಿಗಳು ಮತ್ತು ಗಣ್ಯರು ಸೇರಿದಂತೆ ಪರಿಷತ್ತು ಸದಸ್ಯರನ್ನು ಖುದ್ದು ಭೇಟಿ ಮಾಡಿ ಮತಯಾಚನೆ ನಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಸಕ್ರಿಯ ಸಾಹಿತ್ಯಾಭಿಮಾನಿಯಾಗಿ ಮತ್ತು ಸಾಹಿತ್ಯ ರಚನೆ, ದತ್ತಿ ಉಪನ್ಯಾಸ, ಚಿಂತನೆಗಳು, ರಂಗಭೂಮಿ ಮತ್ತು ಜನಪದ, ಶೈಕ್ಷಣಿಕ ಕ್ಷೇತ್ರದಲ್ಲಿ ನಾನಾ ಪ್ರಕಾರದಲ್ಲಿ ತೃಪ್ತಿ ನೀಡುವಂತೆ ಸೇವೆ ಸಲ್ಲಿಸಿದ್ದೇನೆ. ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದಲ್ಲಿ ಯುವ ಸಾಹಿತಿಗಳಿಗೆ ಮನ್ನಣೆ, ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹ, ಗ್ರಾಮೀಣ ಪ್ರದೇಶಗಳಲ್ಲಿನ ಎಲೆಮರೆಯ ಕಾಯಿಯಂತೆ ಇರುವ ಅಗಮ್ಯ ಪ್ರತಿಭೆಗಳಿಗೆ ಸೂಕ್ತ ವೇದಿಕೆ ನೀಡುವುದು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಲೋಕವನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಗಾರ ಮತ್ತು ಸೃಜನಶೀಲ ಬರಹಗಳಿಗೆ ಮುಕ್ತ ಅವಕಾಶ ಹೀಗೆ ಹತ್ತಾರು ಉದ್ದೇಶಗಳ ಹೊಂದಲಾಗಿದೆ ಎಂದರು.

ಈ ಸಂದರ್ಭದಲ್ಲಿ ವೇಲಾಪುರಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹೆಚ್.ಎಂ.ದಯಾಾನಂದ, ಕಾರ್ಯದರ್ಶಿ ಮ.ಶಿವಮೂರ್ತಿ, ಹಲ್ಮಿಡಿ ಚನ್ನೇಗೌಡ, ಗೌರವ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ, ಪತ್ರಕರ್ತ ಗಣೇಶ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ, ಕೇಶವಮೂರ್ತಿ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.


Post a Comment

Previous Post Next Post