ಹಳೇಬೀಡು ಶಾಲಾ ಮಕ್ಕಳಿಗೆ ಸ್ವಾಗತ ಸಮಾರಂಭ


ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಶಾಲೆಗಳು ಪುನಾರಂಭವಾಗಿವೆ. ಮಕ್ಕಳು ಶಾಲೆಗೆ ಬರಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಹಳೇಬೀಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಸಂತೋಷ್ ಕೆಂಚಾಂಬರವರು ಪಾಲ್ಗೊಂಡು ಮಗುವಿಗೆ ಮಾಸ್ಕ್ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು
ಸುಮಾರು ಒಂದೂವರೆ ವರ್ಷದ ಬಳಿಕ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ಮಕ್ಕಳ ಕಲಿಕಾ ಆಸಕ್ತಿ, ಅವರನ್ನು ಶಾಲೆಗೆ ಕಳುಹಿಸಲು ಪೋಷಕರ ಸಹಕಾರಕ್ಕೆ ನನ್ನ ಅಭಿನಂದನೆಗಳು ಎಂದರು.
                                              ಈ ಸಂದರ್ಭದಲ್ಲಿ  ಹಳೇಬೀಡು ಗ್ರಾಮಪಂಚಾಯಿತಿ ಅಧ್ಯಕ್ಷರಾದ  ಗೀತಾ ಅರುಣ್, ಉಪಾಧ್ಯಕ್ಷರು, st mc ಸದ್ಯಸರು, ಪೋಷಕರು ಶಿಕ್ಷಕರು ಇದ್ದರು.

Post a Comment

Previous Post Next Post